ಬೆಂಗಳೂರು | ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು: ಅಧಿಕಾರಗಳ ವಿರುದ್ಧ ಆಕ್ರೋಶ

ಅಕ್ಷಯ್
ಬೆಂಗಳೂರು : ನಗರದ ಬಸವನಗುಡಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಕ್ಷಯ್ ಎಂಬಾತನ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ.
ಜೂ.15ರಂದು ಘಟನೆ ನಡೆದಿದ್ದು, ಗಾಯಾಳು ಅಕ್ಷಯ್(29)ನನ್ನು ಅಫೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ 60 ಗಂಟೆ ಕಳೆದರೂ ಅಕ್ಷಯ್ ಮೆದುಳು ಸ್ಪಂದಿಸಿರಲಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಇನ್ನು, ಜೂ.19ರ ಗುರುವಾರದಂದು ಮಧ್ಯಾಹ್ನ 1 ಗಂಟೆಗೆ ಅಕ್ಷಯ್ ಕಾರ್ಡಿಯಾಕ್ ಅರೆಸ್ಟ್(ಹೃದಯ ಸ್ತಂಭನ) ಆಗಿ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಒಣಗಿದ ಮರಗಳ ರೆಂಬೆಗಳನ್ನು ಕತ್ತರಿಸುವಂತೆ ಸ್ಥಳೀಯರು ಹಲವು ಬಾರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ಕ್ಕೆ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಈಗ ಅಕ್ಷಯ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Next Story





