ಬ್ಯಾಟರಿ ಚಾಲಿತ, ಮಿಥೆನಾಲ್, ಇಥೆನಾಲ್ ಇಂಧನದ ವಾಹನಗಳಿಗೆ ಪರವಾನಿಗೆ ಪಡೆಯುವಂತೆ ಆದೇಶ

ಬೆಂಗಳೂ : ರಾಜ್ಯದಲ್ಲಿ ಸಂಚರಿಸುವ ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೆ ಮೋಟಾರು ವಾಹನಗಳ ಕಾಯ್ದೆ ಅನ್ವಯ ಪರ್ಮಿಟ್ ಪಡೆಯಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬುಧವಾರ ಸರಕಾರ ಆದೇಶ ಹೊರಡಿಸಿದ್ದು, ಕಾನೂನು, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ತೆಗೆದುಕೊಳ್ಳಲಾಗಿದೆ. ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೆ ರಹದಾರಿ ಪಡೆಯುವುದರಿಂದ ವಿನಾಯತಿ ನೀಡಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದಿದೆ.
ಹೊಸದಾಗಿ ನೋಂದಣಿಯಾಗುವ ಮತ್ತು ಈಗಾಗಲೇ ನೋಂದಣಿಯಾಗಿರುವ ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಇಥೆನಾಲ್ ಇಂಧನ ಬಳಸಿ ಇದುವರೆಗೆ ರಹದಾರಿ ಪಡೆಯದೆ ಸಂಚರಿಸುತ್ತಿರುವ ಎಲ್ಲ ಸಾರಿಗೆ ವಾಹನಗಳಿಗೆ ಸಂಬಂಧಿಸಿದ ಪರವಾನಿಗೆಯನ್ನು ಶುಲ್ಕರಹಿತವಾಗಿ ವಿತರಿಸಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ
Next Story





