ಬೆಂಗಳೂರು | ರೌಡಿಶೀಟರ್ ಹತ್ಯೆ ಪ್ರಕರಣ: ಐವರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ರೌಡಿಶೀಟರ್ನನ್ನು ಹತ್ಯೆಗೈದ ಪ್ರಕರಣದಡಿ ಐವರು ಆರೋಪಿಗಳನ್ನು ಎಚ್ಎಎಲ್ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಶಫೀಕ್(25), ಇರ್ಫಾನ್ ಪಾಶಾ(27) ಶೇಕ್ ಸದ್ದಾಂ(27), ಇಮ್ರಾನ್ ಖಾನ್(27) ಹಾಗೂ ಯತೀಶ್(29) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಜೂ.17ರಂದು ರಾತ್ರಿ ಅನ್ನಸಂದ್ರಪಾಳ್ಯದಲ್ಲಿ ಮೊಹಮ್ಮದ್ ನಯೀಂ(26) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ನಯೀಂನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಒಂದು ವಾರಗಳ ಬಳಿ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ, ದರೋಡೆ ಪ್ರಕರಣಗಳ ಆರೋಪಿಯಾಗಿದ್ದ ನಯೀಂ ವಿರುದ್ಧ ರೌಡಿಶೀಟ್ ತೆರೆಯಲಾಗಿತ್ತು. ಇತ್ತೀಚಿಗೆ ಆಟೋ ಚಾಲನೆಯ ಜೊತೆಗೆ ಕೋಳಿ ಅಂಗಡಿ ಆರಂಭಿಸಿದ್ದ ನಯೀಂ ನೀಲಸಂದ್ರದಲ್ಲಿ ವಾಸವಾಗಿದ್ದ. ಆರೋಪಿ ಶಫೀಕ್ನ ಮೇಲೆ ಈ ಹಿಂದೆ ಹಲ್ಲೆ ಮಾಡಿದ್ದ ನಯೀಂನ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.





