ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ: ಹುಸಿ ಸಂದೇಶ ಎಂದ ಪೊಲೀಸರು

ಸಾಂದರ್ಭಿಕ ಚಿತ್ರ | PC : freepik.
ಬೆಂಗಳೂರು: ನಗರದ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಗುಂಜೂರು ಮುಖ್ಯರಸ್ತೆಯಲ್ಲಿರುವ ಖಾಸಗಿ ಶಾಲೆಯೊಂದಕ್ಕೆ ಮಂಗಳವಾರ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ತಪಾಸಣೆ ನಡೆಸಿದ ಪೊಲೀಸರು ಇದು ಹುಸಿ ಸಂದೇಶ ಎಂದು ಖಚಿತಪಡಿಸಿದ್ದಾರೆ.
ಅನಾಮಧೇಯ ಇ-ಮೇಲ್ ಖಾತೆಯಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಇದನ್ನು ಪರಿಶೀಲಿಸಿದ ಸಿಬ್ಬಂದಿ ಕೂಡಲೇ ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದು, ಶಾಲೆಯ ಆಡಳಿತಾಧಿಕಾರಿಗಳು ಮಕ್ಕಳನ್ನು ಮನೆಗೆ ಕಳುಹಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ವರ್ತೂರು ಠಾಣೆ ಪೊಲೀಸರು, ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳದೊಂದಿಗೆ ಶಾಲೆ ಕಟ್ಟಡ ಹಾಗೂ ಸುತ್ತಮುತ್ತ ಪರಿಶೀಲಿಸಿದಾದರೂ ಯಾವುದೇ ಬಾಂಬ್ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ನಂತರ ಇದು ಹುಸಿ ಸಂದೇಶ ಎಂದು ಖಚಿಸಿ ಪಡಿಸಿದ್ದಾರೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





