ಕಸಾಪ ಕಾರ್ಯಕಾರಿ ಸಮಿತಿಯ ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಗುಡಿಬಂಡೆ ಅನುರಾಧ ಆನಂದ್ ನಾಮ ನಿರ್ದೇಶನ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‍ನ ಕೇಂದ್ರ ಕಾರ್ಯಕಾರಿ ಸಮಿತಿಯ ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಗುಡಿಬಂಡೆ ಅನುರಾಧ ಆನಂದ್ ಅವರನ್ನು ಅಧ್ಯಕ್ಷ ಡಾ.ಮಹೇಶ್ ಜೋಶಿ ನಾಮನಿರ್ದೇಶನ ಮಾಡಿದ್ದಾರೆ.
ಸಾಹಿತ್ಯ ಪರಿಷತ್‍ನ ನಿಬಂಧನೆ 9(3)ರಲ್ಲಿ ಕಸಾಪ ಅಧ್ಯಕ್ಷರಿಗೆ ಇರುವ ಅಧಿಕಾರದನ್ವಯ ನಾಮ ನಿರ್ದೇಶನ ಮಾಡಲಾಗಿದೆ. ಗುಡಿಬಂಡೆ ಅನುರಾಧ ಆನಂದ್ 2 ಬಾರಿ ಗುಡಿಬಂಡೆ ತಾಲೂಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಬರಹಗಾರರಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕನ್ನಡ ಪ್ರೇಮ ಮತ್ತು ನಾಡಿನ ಕುರಿತು ಅಭಿಮಾನ ಪರಿಷತ್‍ಗೆ ಇನ್ನಷ್ಟು ಕ್ರಿಯಾಶೀಲತೆ ತರಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





