ದಂತ ಭಾಗ್ಯ ಯೋಜನೆ: ಫಲಾನುಭವಿಗಳ ವಯೋಮಿತಿ ಇಳಿಕೆ

ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಉಚಿತವಾಗಿ ದಂತ ಪಂಕ್ತಿ ನೀಡುವ ಉದ್ದೇಶದಿಂದ ಜಾರಿಗೊಳಿಸಿರುವ ದಂತ ಭಾಗ್ಯ ಯೋಜನೆಯ ಫಲಾನುಭವಿಗಳ ವಯೋಮಿತಿ 60 ವರ್ಷದಿಂದ 45 ವರ್ಷಕ್ಕೆ ಇಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಅದೇ ರೀತಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಸರಕಾರ ಭರಿಸುವ ಯೂನಿಟ್ ದರ ಪರಿಷ್ಕರಣೆ ಮಾಡಿದ್ದು, ರೋಗಿಗಳ ಸಂಪೂರ್ಣ ದಂತಪಕ್ತಿ ದರವನ್ನು 2 ಸಾವಿರ ರೂಪಾಯಿಗಳಿಂದ 3 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Next Story





