ದೊಡ್ಡಬಳ್ಳಾಪುರ | ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನ

ಬೆಂಗಳೂರು : ನಟ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಘಟನೆ ನಡೆದಿದೆ.
ನಟ ದರ್ಶನ್ ಅಭಿಮಾನಿಗಳಿಂದ ವೈಯಕ್ತಿಕ ತೇಜೋವಧೆ ಹಾಗೂ ಕೊಲೆ ಬೆದರಿಕೆ ಸಂಬಂಧ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಇಂದು (ಜು.31) ನಟ ಪ್ರಥಮ್ ಅವರು ಠಾಣೆಗೆ ಹಾಜರಾಗಿದ್ದರು. ವಿಚಾರಣೆ ಸಲುವಾಗಿ ಸ್ಥಳ ಮಹಜರಿಗೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಮಹಜರು ಮುಗಿಸಿ ಮತ್ತೆ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಪ್ರಥಮ್ ಅವರನ್ನು ದಲಿತ ಸಂಘಟನೆ ಕಾರ್ಯಕರ್ತರು ಪ್ರಶ್ನಿಸಿದರು. ಅಲ್ಲದೇ ನಟನ ಮುಖಕ್ಕೆ ಮಸಿ ಬಳಿಯಲು ಯತ್ನಿಸಲಾಯಿತು. ಕೂಡಲೇ ಪ್ರಥಮ್ ಅವರನ್ನು ರಕ್ಷಿಸಿದ ಪೊಲೀಸರು ಠಾಣೆಯೊಳಗೆ ಕರೆದೊಯ್ದರು.
ನಟ ಪ್ರಥಮ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
Next Story





