ಬೆಂಗಳೂರು | ಆನ್ಲೈನ್ ಟ್ರೇಡಿಂಗ್ ನೆಪದಲ್ಲಿ ವಂಚನೆ ಪ್ರಕರಣ : ನಾಲ್ವರು ಆರೋಪಿಗಳನ್ನು ಬಂಧಿಸಿದ ಈ.ಡಿ.

Photo: Facebook/ED
ಬೆಂಗಳೂರು : ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸಿದ್ದ ಪ್ರಕರಣದಡಿ ನಾಲ್ವರು ಆರೋಪಿಗಳನ್ನು ಜಾರಿ ನಿರ್ದೇಶನಾಲಯ(ಈ.ಡಿ.) ಬಂಧಿಸಿದೆ.
ಶಶಿಕುಮಾರ್(25), ಸಚಿನ್(20), ಕಿರಣ್ ಎಸ್.ಕೆ.(25) ಮತ್ತು ಚರಣ್ರಾಜ್ ಎಂಬವರು ಬಂಧಿತರು ಎಂದು ಗುರುತಿಸಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ಈ.ಡಿ. ನ್ಯಾಯಾಲಯವು 7 ದಿನಗಳ ಕಾಲ ಈ.ಡಿ. ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಆರೋಪಿಗಳು ನಕಲಿ ಕಂಪೆನಿಗಳನ್ನು ಸೃಷ್ಟಿಸಿ ಜನರನ್ನು ಷೇರು ಮಾರುಕಟ್ಟೆಯಲ್ಲಿ ಭಾರೀ ಲಾಭ ಬರುತ್ತದೆ ಎಂದು ಯಾಮಾರಿಸಿ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿದ್ದರು. ಇದಲ್ಲದೆ, ನಕಲಿ ದಾಖಲೆ ನೀಡಿ ಹಲವಾರು ಬ್ಯಾಂಕ್ಗಳಲ್ಲಿ ಖಾತೆ ತೆರೆದು ಹಣ ವರ್ಗಾವಣೆಯಾದ ನಂತರ ಬೇರೆ ಬೇರೆ ಖಾತೆಗಳಿಗೆ ಅದನ್ನು ವರ್ಗಾಯಿಸುತ್ತಿದ್ದರು. ನಂತರ ಆ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಿದ್ದರು ಎಂದು ಈ.ಡಿ. ಮೂಲಗಳು ತಿಳಿಸಿವೆ.
Next Story





