ಡಾ.ಸಿರಿ ಪಿ.ಬಿ ಅವರಿಗೆ ದಂತವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ

ಬೆಂಗಳೂರು: ದಂತವೈದ್ಯಕೀಯ ಕ್ಷೇತ್ರದಲ್ಲಿ ನೀಡುವ ಪ್ರತಿಷ್ಠಿತ ಅಂತರಾಷ್ಟ್ರೀಯ Pierrie Fauchard Academy Senior Student Merit ಪ್ರಶಸ್ತಿಯನ್ನು MDS ನಲ್ಲಿ ಪ್ರಥಮ ರ‍್ಯಾಂಕ್ ವಿಜೇತೆ ಡಾ.ಸಿರಿ ಪಿ.ಬಿ ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ನಡೆದ Pierre fauchard academy - ಏಷ್ಯಾ ರಿಜನ್ ಇಂಡಿಯಾ ಸೆಕ್ಷನ್ ಇದರ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪಡೆದುಕೊಂಡರು.
ಡಾ. ಸಿರಿಯವರ ಕನ್ಸರ್ವೇಟಿವ್ ಡೆಂಟಿಸ್ಟ್ರಿ ಮತ್ತು ಎಂಡೋಡಾಂಟಿಕ್ಸ್ ಪದವಿಯ ಶೈಕ್ಷಣಿಕ ಸಾಧನೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಬಂಧಗಳ ಮಂಡನೆ ಹಾಗೂ ಪ್ರಕಟಣೆಗಳನ್ನು ಪರಿಗಣಿಸಿ ಇವರನ್ನು ಆಯ್ಕೆ ಮಾಡಿರುತ್ತಾರೆ.
ಇವರು ದೇಶದಿಂದ ಆಯ್ಕೆಯಾದ ಎಂಟು ಅಭ್ಯರ್ಥಿಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಅಭ್ಯರ್ಥಿ.
ಇವರು ಡಾ. ಅಶ್ವಿನ್ ಪರಕ್ಕಜೆ ಅವರ ಪತ್ನಿ, ಬೀಡುಬೈಲು ಗಣಪತಿ ಭಟ್ ಮತ್ತು ತ್ರಿವೇಣಿ ಅವರ ಸುಪುತ್ರಿ.
Next Story





