ಐಪಿಎಲ್ ಗುಜರಾತಿಗೆ ಹೈಜಾಕ್ ಮಾಡಲಾಗಿದೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಮೇ 7: ದೇಶದ ಎಲ್ಲ ಬಂಡವಾಳ ಗುಜರಾತ್ ರಾಜ್ಯಕ್ಕೆ ಹೋಗುತ್ತಿದೆ. ಇದೀಗ ಕೇಂದ್ರ ಸರಕಾರ ಐಪಿಎಲ್ ಅನ್ನೂ ಹೈಜಾಕ್ ಮಾಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಾಏಕಿ ಬೆಂಗಳೂರಿನಿಂದ ಐಪಿಎಲ್ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ.ಇದಕ್ಕೆ ಕಾರಣವನ್ನು ಹೇಳಿಲ್ಲ. ಇದೇ ರೀತಿ, ಗುಜರಾತಿಗೆ ಆರು ಸೆಮಿಕಂಡಕ್ಟರ್ ಯೋಜನೆಗಳು ಹೋಗಿವೆ. ಕಂಪೆನಿಗಳಿಗೆ ಸಬ್ಸಿಡಿ ಕೊಡುವಾಗ ಅರ್ಜಿ ಹಾಕುತ್ತಾರೆ. ಅರ್ಜಿಯಲ್ಲಿ ನಿಮ್ಮ ಮೊದಲ ಆಯ್ಕೆ ಯಾವುದೆಂದು ಇರುತ್ತೆ. ಕರ್ನಾಟಕ ಎಂದೂ ಉಲ್ಲೇಖಿಸಿದರೂ ಅದು ಗುಜರಾತ್‍ಗೆ ಹೋಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.
ಅಸ್ಸಾಮ್ ವಿದ್ಯಾರ್ಥಿಗಳು ಇಲ್ಲಿ ಬಂದು ಖಾಸಗಿ ಕಂಪೆನಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. 30-40 ವರ್ಷದಿಂದ ಒಂದು ವ್ಯವಸ್ಥೆ ಕಟ್ಟಲಾಗಿದೆ. ಆ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
Next Story




