ಒಂದೇ ಕುಟುಂಬದ 7 ಮಂದಿಯ ಕೊಲೆ ಪ್ರಕರಣ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಬೆಂಗಳೂರು: ಒಂದೇ ಕುಟುಂಬದ ಏಳು ಜನರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೂರ್ವ ಯೋಜಿತ ಕೃತ್ಯವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ .
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ತಿ ವಿವಾದವು ಹತ್ಯೆ ಮಾಡಲು ಕಾರಣ ಎನ್ನಲಾಗಿದ್ದು, ಆರೋಪಿಯು ತನ್ನ 16 ವರ್ಷದ ಮಗಳನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಆರೋಪಿಯು ಮಾನಸಿಕ ಖಿನ್ನತೆಗೂ ಒಳಗಾಗಿರುವುದಾಗಿ ಹೇಳುತ್ತಿದ್ದು, ನಾವು ಈಗ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ತನಿಖೆ ಮುಂದುವರಿದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಅವರುಬಂದ ಪುಟ್ಟ ಹೋದ ಪುಟ್ಟ ಎಂಬುದಕ್ಕಷ್ಟೇ ಸೀಮಿತವಾಗಿದ್ದಾರೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಂದಾಗ ಯಡಿಯೂರಪ್ಪ ಇದ್ದರು. ಆಗ ಮನವಿ ಮಾಡಿಕೊಂಡರೂ ಹಣ ಕೊಟ್ಟಿಲ್ಲ. ಅವರು ತೆರಿಗೆ ತಗೆದುಕೊಳ್ಳುವುದಕ್ಕಾಗಿ ಬರುತ್ತಾರೆ ಎಂದು ಅವರು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಲ್ಲಿಗೆ ಭೇಟಿ ನೀಡಿದ್ದರು. ಇಂಡಿಯಾ ಒಕ್ಕೂಟದ ಸಭೆಗಳು ನಡೆಯುತ್ತಿವೆ. ಮತದಾರರ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಬಗ್ಗೆ ಚರ್ಚೆ ಮಾಡಬಹುದು. ರಾಜ್ಯದ ವಿಚಾರ ಚರ್ಚೆಯಾಗುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.






