ಬೆಂಗಳೂರು| ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ: 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ವಿರುದ್ಧ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಒಟ್ಟು 44 ಮಹಿಳೆಯರನ್ನು ರಕ್ಷಿಸಿ, 34 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ನಗರದ ಟಿನ್ ಫ್ಯಾಕ್ಟರಿ ಬಳಿಯಿರುವ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾನ ಇಂಟರ್ ನ್ಯಾಷನಲ್ ಸ್ಫಾ ಪ್ರೈ.ಲಿ. ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿ ದರ್ಮೇಂದ್ರ ನೇತೃತ್ವದ ತಂಡದಿಂದ ಜ.6ರ ರಾತ್ರಿ ದಾಳಿ ನಡೆಸಿರುವುದಾಗಿ ಗೊತ್ತಾಗಿದೆ.
ಬಹುಮಹಡಿ ಕಟ್ಟಡವೊಂದರ 1 ಮತ್ತು 6ನೆ ಅಂತಸ್ತಿನಲ್ಲಿ ಅನಿಲ್ ಎಂಬಾತ ಸ್ಪಾ ನಡೆಸುತ್ತಿದ್ದ. ಸದ್ಯ ಈತನನ್ನು ಬಂಧಿಸಲಾಗಿದೆ. ಆರೋಪಿ ಅನಿಲ್ ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸಿ ಸ್ಪಾ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
Next Story





