ರಾಹುಲ್ ದ್ರಾವಿಡ್ ಕಾರು ಅಪಘಾತ: ವಾಗ್ವಾದ, ವಿಡಿಯೋ ವೈರಲ್

Screengrab:X/@kaniyar_spandan
ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಾರು ಗೂಡ್ಸ್ ಗಾಡಿಗೆ ತಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ಅಪಘಾತದಲ್ಲಿ ಯಾವುದೇ ಗಾಯವಾಗಲಿ, ಪ್ರಾಣಾಪಾಯದಂತಹ ಘಟನೆಗಳು ಸಂಭವಿಸಿಲ್ಲ.
ಕಾರಿಗೆ ಮತ್ತೊಂದು ವಾಹನ ತಾಗಿದ್ದು ಬಳಿಕ ರಾಹುಲ್ ದ್ರಾವಿಡ್ ಕಾರಿನಿಂದ ಕೆಳಗಿಳಿದು ಕಾರನ್ನು ಪರಿಶೀಲಿಸಿದ್ದಾರೆ. ಮಾತ್ರವಲ್ಲ ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹಾಗೂ ಗೂಡ್ಸ್ ಆಟೋ ಚಾಲಕನ ನಡುವೆ ಸಣ್ಣ ವಾಗ್ವಾದ ನಡೆದಿದೆ.
ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಘಟನೆ ಸಂದರ್ಭದಲ್ಲಿ ದ್ರಾವಿಡ್ ಹಾಗೂ ಗೂಡ್ಸ್ ಚಾಲಕನ ನಡುವೆ ಸಣ್ಣ ಮಾತಿನ ಚಕಮಕಿ ನಡೆದಿದ್ದು, ಮಾತುಕತೆ ಬಳಿಕ ಸ್ಥಳದಿಂದ ರಾಹುಲ್ ದ್ರಾವಿಡ್ ತೆರಳಿದ್ದಾರೆ.
Rahul Dravid’s Car touches a goods auto on Cunningham Road Bengaluru #RahulDravid #Bangalore pic.twitter.com/AH7eA1nc4g
— Spandan Kaniyar ಸ್ಪಂದನ್ ಕಣಿಯಾರ್ (@kaniyar_spandan) February 4, 2025