ರಾಜಾರಾಂ ತಲ್ಲೂರು ಅವರ ʼಕರಿಡಬ್ಬಿʼ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವರ್ಷದ ಪುಸ್ತಕ ಬಹುಮಾನ

ರಾಜಾರಾಂ ತಲ್ಲೂರು
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ವರ್ಷದ ಪುಸ್ತಕ ಬಹುಮಾನ ಪ್ರಕಟಗೊಂಡಿದ್ದು, ಹಿರಿಯ ಲೇಖಕ ಹಾಗೂ ಅಂಕಣಕಾರ ರಾಜಾರಾಂ ತಲ್ಲೂರು ಅವರ ʼಕರಿಡಬ್ಬಿʼ ಕೃತಿ ಸಹಿತ 18 ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿದೆ.
2022ನೇ ವರ್ಷದ ಪುಸ್ತಕ ಬಹುಮಾನ ವಿಜೇತರು:
ರಾಮು ಮೈಸೂರು-ವಿಷ್ಣು ಕ್ರಾಂತಿ ಮತ್ತು ಇತರ ಪದ್ಯಗಳು
ರೇವಣ್ಣ ಸಿದ್ದಪ್ಪ ಜಿ. ಆರ್.-ಬಾಳ ನೌಕೆಗೆ ಬೆಳಕಿನ ದೀಪ
ಸುಮಂಗಲಾ ಎಸ್. ಮಮ್ಮಿಗಟ್ಟಿ-ಬಯಲ ಬೆರಗು
ದಯಾನಂದ-ಬುದ್ಧನ ಕಿವಿ
ಬಿದರಹಳ್ಳಿ ನರಸಿಂಹಮೂರ್ತಿ-ಮಾಯಾದಂಡ
ಶ್ರೀಹರ್ಷ ಸಾಲಿಮಠ-ಡಾರ್ಕ್ ಹೂಮರ್
ಚಿಂತಾಮಣಿ ಕೊಡ್ಲೆಕೆರ-ಗಿಂಡಿಯಲ್ಲಿ ಗಂಗೆ
ಪಿ.ರಾಮಯ್ಯ-ನಾನು ಹಿಂದೂ ರಾಮಯ್ಯ ಅರವತ್ತು ವರ್ಷಗಳ ಅನುಭವ ಕಥನ
ಡಾ.ಚನ್ನಪ್ಪ ಕಟ್ಟಿ-ಕುಯಿಲು
ಸಂತೆಬೆನ್ನೂರು ಫೈಜ್ಯಟ್ರಾಜ್-ಮಗಳಿಗೆ ಹೇಳಿದ ಕಥೆಗಳು
ಡಾ.ಸುಕನ್ಯಾ ಸೊನಗಹಳ್ಳಿ-ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ
ಹೆಚ್.ಎನ್. ನಾಗಮೋಹನ ದಾಸ್-ಸಂವಿಧಾನ ಮತ್ತು ವಚನಗಳು
ಡಾ. ಶೈಲಜಾ ಇಂ.ಹಿರೇಮಠ-ನಿರೂಪಣೆಯಾಚೆಗೆ
ಅನಿಲ ಸಿ.ಹೊಸಮನಿ-ಡಾ. ಅಂಬೇಡ್ಕರ್ ಸಹವಾಸದಲ್ಲಿ
ರಾಜಾರಾಂ ತಲ್ಲೂರು-ಕರಿಡಬ್ಬಿ
ಪಿ.ವಿ.ನಂಜರಾಜ ಅರಸ್-ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು-ಇಂದು
ಮಲ್ಲಿಕಾರ್ಜುನ ಶೆಲ್ಲಿಕೇರಿ-ದೀಡೆಕರೆ ಜಮೀನು
ಪೈಯನೂರು ಕುನ್ಹಿರಾಮನ್ ಮತ್ತು ಮೋಹನ ಕುಂಟರ್-ಚಾರು ವಸಂತ
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.







