ಮಾಫಿ ಸಾಕ್ಷಿ ವಿಚಾರಣೆಗೆ ದರ್ಶನ್ ಪರ ವಕೀಲರ ವಿರೋಧ: ವಿಚಾರಣೆ ನಾಳೆಗೆ ಮುಂದೂಡಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣ

ರೇಣುಕಸ್ವಾಮಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಇಂದು 59 ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಮಾಫಿ ಸಾಕ್ಷಿ ಪ್ರದೂಶ್ ವಿಚಾರಣೆಗೆ ಸೆ.23ಕ್ಕೆ ಸಮನ್ಸ್ ನೀಡುವಂತೆ ಎಸ್ಪಿಪಿ ಪ್ರಸನ್ನ ಕುಮಾರ್ ಕೋರಿದರು. ಆದರೆ ದರ್ಶನ್ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಲಯದ ಅದೇಶವನ್ನು ನಾವು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ, ಹೀಗಾಗಿ ಈಗಲೇ ಮಾಫಿ ಸಾಕ್ಷಿ ಹೇಳಿಕೆ ದಾಖಲು ಆಗಬಾರದು ಎಂದರು.
ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡುವ ಬಗ್ಗೆ ಸೆ.22ರಂದು ಸೂಕ್ತ ಅದೇಶ ಮಾಡೋಣ ಎಂದು ವಿಚಾರಣೆ ಮುಂದೂಡಿದರು.
ಪವಿತ್ರಾ ಗೌಡ ಜಾಮೀನು ಅರ್ಜಿಯೂ ಮುಂದೂಡಿಕೆ
ಇತ್ತ ಕಡೆ ಪ್ರಕರಣದ ಎರಡನೇ ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಪ್ರಾಸಿಕ್ಯೂಷನ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು. ಪ್ರಕರಣವು ಸಾಕ್ಷಿಗಳ ವಿಚಾರಣೆಯಂತಹ ಗಂಭೀರ ಹಂತದಲ್ಲಿದೆ. ಈ ಹಂತದಲ್ಲಿ ಜಾಮೀನು ನೀಡಬಾರದು ಎಂದಿತು.
ಜಾಮೀನು ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ಸೆ.22ಕ್ಕೆ ಮುಂದೂಡಿತು.




