ರೇಣುಕಾಸ್ವಾಮಿ ಕೊಲೆ ಪ್ರಕರಣ: ಇಂದು ಮಾಫಿ ಸಾಕ್ಷಿ ಪ್ರದೂಶ್ ರಾವ್ ಹೇಳಿಕೆ ದಾಖಲು

ರೇಣುಕಸ್ವಾಮಿ
ಬೆಂಗಳೂರು, ಸೆ.28: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14 ನೇ ಆರೋಪಿಯಾಗಿದ್ದ ಈಗ ಮಾಫಿ ಸಾಕ್ಷಿ ಆಗಿರುವ ಪ್ರದೂಶ್ ರಾವ್ ಹೇಳಿಕೆ ದಾಖಲೀಕರಣ ಪ್ರಕ್ರಿಯೆ ಇಂದು(ಸೆ.28) 59 ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯಲಿದೆ.
ಈ ಸಂಬಂಧ ಈಗಾಗಲೇ ನ್ಯಾಯಾಧಿಶರು ಸಮನ್ಸ್ ಜಾರಿ ಮಾಡಿದ್ದು, ಇಂದು ಬಿಗಿ ಭದ್ರತೆಯಲ್ಲಿ ಪರಪ್ಪನ ಆಗ್ರಹಾರದಿಂದ ಪ್ರದೂಶ್ ರಾವ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ 14 ನೇ ಅರೋಪಿಯಾಗಿ ಪ್ರದೂಶ್ ರಾವ್ ನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ದರ್ಶನ್ ನಿಂದ ಹಣ ಪಡೆದು ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಮಾಡಿದ ಆರೋಪವನ್ನ ಪ್ರದೂಶ್ ರಾವ್ ಮೇಲೆ ಹೊರಿಸಿ ಕಾಮಾಕ್ಷಿ ಪಾಳ್ಯ ಠಾಣಾ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.
ಆದರೆ ನಂತರದ ಬೆಳವಣಿಗೆಯಲ್ಲಿ ಪ್ರದೂಶ್ ರಾವ್ ಮಾಫಿ ಸಾಕ್ಷಿ ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಪ್ರಾಸಿಕ್ಯೂಷನ್ ಪ್ರದೂಶ್ ರಾವ್ ಅರ್ಜಿಗೆ ಅನುಮತಿ ನೀಡಿತ್ತು. ಅಲ್ಲದೆ ವಿಚಾರಣೆ ನ್ಯಾಯಾಲಯ ಕೂಡ ಮಾಫಿ ಸಾಕ್ಷಿ ಆಗಲು ಅದೇಶ ನೀಡಿತ್ತು. ಆದರೆ ದರ್ಶನ್ ಪರ ವಕೀಲರು ಇದನ್ನ ಪ್ರಶ್ನೆ ಮಾಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ದರ್ಶನ್ ಪರ ವಕೀಲರ ಅರ್ಜಿ ವಜಾ ಮಾಡಿದ್ದಿಂದ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಲು ವಿಚಾರಣಾ ನ್ಯಾಯಾಲಯ ಮುಂದಾಗಿದೆ
ಇತ್ತ ಕೊಲೆಯ ಸಂಪೂರ್ಣ ವಿಚಾರಗಳು ಪ್ರದೂಶ್ ರಾವ್ ಗೆ ತಿಳಿದಿದ್ದು, ಯಾರ ವಿರುದ್ದ ಏನೆಲ್ಲ ಹೇಳಿಕೆ ನೀಡಬಹುದು ಎಂಬ ಕುತೂಹಲ ತೀವ್ರವಾಗಿದೆ.






