ನಮ್ಮಲ್ಲಿನ ಗೊಂದಲ ಬಗೆಹರಿಸಿ : ಸತೀಶ್ ಜಾರಕಿಹೊಳಿ

ಬೆಂಗಳೂರು : ಸಿಎಂ, ಡಿಸಿಎಂ ಹೊಸದಿಲ್ಲಿಗೆ ಹೋಗಬೇಕು. ನಮ್ಮಲ್ಲಿರುವ ಗೊಂದಲ ಬಗೆಹರಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಇದೇ ರೀತಿ ಹೇಳಿದ್ದಾರೆ. ಆದರೆ, ಹೈಕಮಾಂಡ್ ನಾಯಕರು ಕರೆಯಬಹುದು. ಎಲ್ಲರ ಅಭಿಪ್ರಾಯವೂ ಅದೇ ಇದೆ. ಏನಾದರೂ ತೀರ್ಮಾನ ಆಗಲಿ, ಮೊದಲು ಗೊಂದಲಗಳನ್ನು ಸರಿಪಡಿಸಬೇಕು. ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಗೆಲುವು ನಿರೀಕ್ಷೆ ಮಾತ್ರವಲ್ಲದೆ, ಅಹಿಂದ ಮತಗಳು ವಾಪಸ್ ಬಂದಿವೆ. ಕಾಂಗ್ರೆಸ್ ಗೆಲ್ಲಲು ಅಹಿಂದವೇ ಮುಖ್ಯ ಎಂದರು.
Next Story




