ಸಕ್ಕರೆ ಬೆಲೆ ಕ್ವಿಂಟಲ್ಗೆ 50 ರೂ.ಹೆಚ್ಚಾದರೆ ಕಬ್ಬಿಗೆ ಟನ್ಗೆ 4,000 ರೂ.ದರ : ಸತೀಶ್ ಜಾರಕಿಹೊಳಿ

ಬೆಳಗಾವಿ : ಕಬ್ಬಿನ ಬೆಲೆ ನಿಗದಿಯಲ್ಲಿ ಲಾಭಾಂಶ ಹಂಚಿಕೆ ಸೂತ್ರ ಅನುಸರಿಸಲಾಗುತ್ತಿದೆ. ಸಕ್ಕರೆ ಮಾರಾಟದ ಬೆಲೆ ಪ್ರತಿ ಕ್ವಿಂಟಲ್ಗೆ 50 ರೂ. ಹೆಚ್ಚಾದರೆ ರೈತರಿಗೆ ಕಬ್ಬಿಗೆ ಟನ್ಗೆ 4,000 ರೂ. ದರ ದೊರೆಯಲಿದೆ. ಕಬ್ಬಿನ ರಿಕವರಿ ಆಧಾರದ ಮೇಲೆ ದರ ನಿರ್ಧಾರವಾಗುವುದರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಏಕರೂಪದ ದರ ನೀಡಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ರೈತರು ಮೊದಲಿನಿಂದಲೂ ಹೋರಾಟ ನಡೆಸುತ್ತಿದ್ದರು. ರೈತರ ಹೋರಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಆರಂಭದಲ್ಲಿ ಕ್ವಿಂಟಲ್ಗೆ 45 ರೂ. ಸಕ್ಕರೆ ಬೆಲೆಯನ್ನು ಆಧಾರವಾಗಿಟ್ಟುಕೊಂಡು ಟನ್ಗೆ 3,600 ರೂ. ದರ ನಿಗದಿಪಡಿಸಲಾಗಿತ್ತು. ಇದೀಗ ಕ್ವಿಂಟಲ್ಗೆ 50 ರೂ. ಸಕ್ಕರೆ ಬೆಲೆಯನ್ನು ಆಧಾರವಾಗಿಟ್ಟುಕೊಂಡು ದರ ಘೋಷಿಸಲಾಗಿದೆ. ಸಕ್ಕರೆ ಮಾರಾಟದ ಬೆಲೆಗೆ ಅನುಗುಣವಾಗಿ ರೈತರಿಗೆ ಹಣ ಪಾವತಿಸುವ ಸೂತ್ರವನ್ನು ಕಾರ್ಖಾನೆಗಳು ಅನುಸರಿಸುತ್ತಿವೆ ಎಂದುತಿಳಿಸಿದರು.




