‘ವಿದ್ಯಾವಾಹಿನಿ ತಂತ್ರಾಂಶ’ದಲ್ಲಿ ಎಸ್ಡಿಎಂಸಿ ಮಾಹಿತಿ ಸಲ್ಲಿಸಲು ಅವಧಿ ವಿಸ್ತರಣೆ

ಸಾಂದರ್ಭಿಕ ಚಿತ್ರ | PC : Image by pch.vector on Magnific
ಬೆಂಗಳೂರು : 2026-27ನೇ ಸಾಲಿನ ಅತ್ಯುತ್ತಮ ಎಸ್ಡಿಎಂಸಿ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಎಲ್ಲ ಶಾಲೆಗಳ ಎಸ್ಡಿಎಂಸಿಗಳಿಗೆ ಸಮಾನ ಅವಕಾಶ ನೀಡುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳು ವಿದ್ಯಾವಾಹಿನಿ ತಂತ್ರಾಂಶದಲ್ಲಿ ಶೇ.100ರಷ್ಟು ಪಾರದರ್ಶಕವಾಗಿ ಮಾಹಿತಿಯನ್ನು ಸಲ್ಲಿಸಲು ಸಮಯವನ್ನು ವಿಸ್ತರಿಸಿ ಕರ್ನಾಟಕ ಸಮಗ್ರ ಶಿಕ್ಷಣ ವಿಭಾಗದ ರಾಜ್ಯ ಯೋಜನಾ ನಿರ್ದೇಶಕರು ಪ್ರಕಟಣೆೆ ಹೊರಡಿಸಿದ್ದಾರೆ.
ಸೆ.21ರಿಂದ ಅ.26ರವರೆಗೆ ಶಾಲಾ ಹಂತ, ಅ.27ರಿಂದ 30ರವರೆಗೆ ಕ್ಲಸ್ಟರ್ ಹಂತ, ಅ.31ರಿಂದ ನ.3ರವರೆಗೆ ತಾಲೂಕು ಹಂತ, ನ.4ರಿಂದ 10ರವರೆಗೆ ಜಿಲ್ಲಾ ಹಂತದಲ್ಲಿ ಎಲ್ಲ ಶಾಲೆಗಳು ವಿದ್ಯಾವಾಹಿನಿ ತಂತ್ರಾಂಶದ ಮೂಲಕ ಎಸ್ಡಿಎಂಸಿ ಮಾಹಿತಿಗಳನ್ನು ಪಾರದರ್ಶಕವಾಗಿ ನೀಡಬೇಕು ಎಂದು ತಿಳಿಸಿದ್ದಾರೆ.
ಈ ವಿಸ್ತರಣೆಯ ಸಮಯವನ್ನು ಬಹಳ ಗಂಭೀರವಾಗಿ ಎಲ್ಲ ಹಂತದ ಅಧಿಕಾರಿಗಳು ಪರಿಗಣಿಸಬೇಕು ಹಾಗೂ ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳು ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಯಾವುದೇ ವಿಳಂಬ ಮತ್ತು ನಿರ್ಲಕ್ಷ್ಯಕ್ಕೆ ಅವಕಾಶ ನೀಡದಂತೆ ಶೇ.100ರಷ್ಟು ಪೂರ್ಣಗೊಳಿಸುವ ಜವಾಬ್ದಾರಿ ಎಲ್ಲ ಹಂತದ ಅಧಿಕಾರಿಗಳದ್ದಾಗಿರುತ್ತದೆ ಎಂದು ಯೋಜನಾ ನಿರ್ದೇಶಕರು ಸೂಚನೆ ನೀಡಿದ್ದಾರೆ.




