ಹಿರಿಯ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ಗೆ ಡಿಐಜಿಯಾಗಿ ಭಡ್ತಿ

ಅಬ್ದುಲ್ ಅಹದ್
ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ, ಬಿಎಂಟಿಸಿ ಸುರಕ್ಷತೆ ಹಾಗೂ ಜಾಗೃತ ವಿಭಾಗದ ನಿರ್ದೇಶಕ ಅಬ್ದುಲ್ ಅಹದ್ ಅವರು ಬುಧವಾರ ಉಪಪೊಲೀಸ್ ಮಹಾನಿರೀಕ್ಷಕರಾಗಿ (ಡಿಐಜಿ) ಭಡ್ತಿ ಪಡೆದಿದ್ದಾರೆ. ಗುರುವಾರ ಅವರು ಬಿಎಂಟಿಸಿ ಸುರಕ್ಷತೆ ಹಾಗೂ ಜಾಗೃತ ವಿಭಾಗದ ಡಿಐಜಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ಅಬ್ದುಲ್ ಅಹದ್ ಅವರು ಈ ಹಿಂದೆ ಬೆಂಗಳೂರಿನ ಸಿಟಿ ಕ್ರೈಂ ಬ್ರ್ಯಾಂಚ್ ಡಿಸಿಪಿ, ಕರಾವಳಿ ಕಾವಲು ಪಡೆಯ ಎಸ್ಪಿ, ವೈಟ್ ಫೀಲ್ಡ್ ಡಿಸಿಪಿ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬೆಂಗಳೂರು ಎಸ್ಪಿಯಾಗಿ, ಸಿಐಡಿಯಲ್ಲಿ ಆರ್ಥಿಕ ಅಪರಾಧಗಳ ವಿಭಾಗದ ಎಸ್ಪಿಯಾಗಿ ಹಾಗೂ ಕೆಎಸ್ಆರ್ಪಿಯಲ್ಲಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆ.
Next Story





