2026-27ನೇ ಸಾಲಿನ ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1, 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಸಾಂದರ್ಭಿಕ ಚಿತ್ರ | Image by rawpixel.com on Magnific
ಬೆಂಗಳೂರು : 2026-27ನೇ ಸಾಲಿನ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಗುರುವಾರ ಪ್ರಕಟಿಸಿದೆ.
2027ರ ಎಸೆಸೆಲ್ಸಿ ಪರೀಕ್ಷೆ-1 ಮಾರ್ಚ್ 22ರಿಂದ ಎಪ್ರಿಲ್ 5ರವರೆಗು ಹಾಗೂ ಎಸೆಸೆಲ್ಸಿ ಪರೀಕ್ಷೆ-2 ಮೇ24ರಿಂದ ಮೇ31ರವರೆಗೂ ಮತ್ತು 2027ರ ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 17ರವರೆಗು ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-2 ಮೇ 3ರಿಂದ ಪ್ರಾರಂಭವಾಗಿ ಮೇ15ರವರೆಗೂ ನಡೆಯಲಿವೆ. ಬಹುತೇಕ ಎಲ್ಲ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಆರಂಭಗೊಳ್ಳಲಿವೆ.
2027ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ವೇಳಾಪಟ್ಟಿ ಅನ್ವಯ ಫೆ.27ರಂದು ಕನ್ನಡ, ಅರೇಬಿಕ್, ಮಾ.1ರಂದು ಇಂಗ್ಲಿಷ್, ಮಾ.2ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃ ತ, ಫ್ರೆಂಚ್, ಮಾ.3ರಂದು ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಮಾ.4ರಂದು ಸಮಾಜಶಾಸ್ತ್ರ, ಭೌತಶಾಸ್ತ್ರ, ಮಾ.5ರಂದು ಲೆಕ್ಕಶಾಸ್ತ್ರ, ಮಾ.8ರಂದು ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ, ಮಾ.9ರಂದು ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ, ಮಾ.11ರಂದು ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ ಉಡುಪುಗಳ ತಯಾರಿಕೆ/ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಆಂಡ್ ವೆಲ್ನೆಸ್, ಮಾ.12ರಂದು ವ್ಯವಹಾರ ಅಧ್ಯಯನ, ಗಣಿತ, ಮಾ.13ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ, ಮಾ.15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ, ಮಾ.16ರಂದು ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಮಾ.17ರಂದು ಹಿಂದಿ ಪರೀಕ್ಷೆಗಳು ನಡೆಯಲಿವೆ.
2027ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ ಅನ್ವಯ, ಮೇ 3ರಂದು ಕನ್ನಡ, ಅರೇಬಿಕ್, ಮೇ 4ರಂದು ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಮೇ5ರಂದು ರಾಜ್ಯಶಾಸ್ತ್ರ, ಗಣಕಶಾಸ್ತ್ರ, ಮೇ6ರಂದು ಇತಿಹಾಸ, ರಸಾಯನಶಾಸ್ತ್ರ, ಮೇ7ರಂದು ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣಶಾಸ್ತ್ರ, ಮೇ8ರಂದು ಐಚ್ಛಿಕಕನ್ನಡ, ಭೌತಶಾಸ್ತ್ರ, ಮೂಲಗಣಿತ, ಮೇ10ರಂದು ಅರ್ಥಶಾಸ್ತ್ರ, ಗಣಿತ, ಮೇ11ರಂದು ಹಿಂದಿ, ಮೇ12ರಂದು ಇಂಗ್ಲೀಷ್, ಮೇ13ರಂದು ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ14ರಂದು ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ, ಮೇ15ರಂದು ಬೆಳಗ್ಗೆ 10 ಗಂಟೆಗೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮೇ15ರಂದು ಮಧ್ಯಾಹ್ನ 2ಗಂಟೆಗೆ ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್ನೆಸ್ ಪರೀಕ್ಷೆಗಳು ನಡೆಯಲಿವೆ.
2027ರ ಎಸೆಸೆಲ್ಸಿ ಪರೀಕ್ಷೆ-1ರ ವೇಳಾಪಟ್ಟಿ ಅನ್ವಯ, ಮಾ.22ರಂದು ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್(ಎನ್ಸಿಇಆರ್ಟಿ) ಸಂಸ್ಕೃತ, ಮಾ.25ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಮಾ.27ರಂದು ದ್ವಿತೀಯ ಭಾಷೆಗಳಾದ ಇಂಗ್ಲೀಷ್, ಕನ್ನಡ, ಮಾ.30ರಂದು ಗಣಿತ, ಸಮಾಜಶಾಸ್ತ್ರ, ಎ.2ರಂದು ತೃತೀಯ ಭಾಷೆಗಳಾದ ಹಿಂದಿ(ಎನ್ಸಿಇಆರ್ಟಿ), ಹಿಂದಿ, ಕನ್ನಡ(ಪುನರಾವರ್ತಿತ ಅಭ್ಯರ್ಥಿಗಳಿಗೆ ಮಾತ್ರ), ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕøತ, ಕೊಂಕಣಿ, ತುಳು, ಮರಾಠಿ ಹಾಗೂ ಎನ್ಎಸ್ಕ್ಯೂಎಫ್ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ನೆಸ್, ಯಂತ್ರಾಂಶ ಉಡುಪುಗಳ ತಯಾರಿಕೆ/ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ವೇರ್, ಎ.3ರಂದು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪರೀಕ್ಷೆಗಳು ಹಾಗೂ ಅರ್ಥಶಾಸ್ತ್ರ, ಎ.5ರಂದು ಸಮಾಜವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
ಎಸೆಸೆಲ್ಸಿ ಪರೀಕ್ಷೆ-2ರ ವೇಳಾಪಟ್ಟಿ ಅನ್ವಯ, ಮೇ24ರಂದು ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್(ಎನ್ಸಿಇಆರ್ಟಿ), ಸಂಸ್ಕೃತ, ಮೇ25ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಮೇ26ರಂದು ದ್ವಿತೀಯ ಭಾಷೆಗಳಾದ ಇಂಗ್ಲೀಷ್, ಕನ್ನಡ, ಮೇ27ರಂದು ಗಣಿತ, ಸಮಾಜಶಾಸ್ತ್ರ, ಮೇ28ರಂದು ತೃತೀಯ ಭಾಷೆಗಳಾದ ಹಿಂದಿ(ಎನ್ಸಿಇಆರ್ಟಿ), ಹಿಂದಿ, ಕನ್ನಡ(ಪುನರಾವರ್ತಿತ ಅಭ್ಯರ್ಥಿಗಳಿಗೆ ಮಾತ್ರ), ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕøತ, ಕೊಂಕಣಿ, ತುಳು, ಮರಾಠಿ ಹಾಗೂ ಎನ್ಎಸ್ಕ್ಯೂಎಫ್ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ನೆಸ್, ಯಂತ್ರಾಂಶ ಉಡುಪುಗಳ ತಯಾರಿಕೆ/ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ವೇರ್, ಮೇ29ರಂದು ಸಮಾಜ ವಿಜ್ಞಾನ, ಮೇ31ರಂದು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪರೀಕ್ಷೆಗಳು ಹಾಗೂ ಅರ್ಥಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.






