ರಾಜ್ಯ ಚುನಾವಣಾ ಆಯೋಗ ಇವಿಎಂಗಳ ಬಗ್ಗೆ ಯಾವುದೆ ಸಮೀಕ್ಷೆ ನಡೆಸಿಲ್ಲ: ಸ್ಪಷ್ಟನೆ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಹಲವು ದಿನಪತ್ರಿಕೆಗಳಲ್ಲಿ ಜ.3ರಂದು ‘ರಾಜ್ಯ ಚುನಾವಣಾ ಆಯೋಗವು ಮೇ 2025ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಶೇ.83ರಷ್ಟು ಜನರು ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ’ ಎಂಬ ಸುದ್ದಿಗಳು ಪ್ರಕಟಗೊಂಡಿದೆ.
ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುವ ಅಧಿಕಾರ ಹೊಂದಿದೆ. ಪತ್ರಿಕೆಗಳಲ್ಲಿ ಪ್ರಕಟಿಸಿರುವಂತೆ ಇವಿಎಂಗಳ ಬಗ್ಗೆ ಯಾವುದೆ ಸಮೀಕ್ಷೆಯನ್ನು ನಡೆಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಯ ಪ್ರಕಟನೆ ಸ್ಪಷ್ಟನೆ ನೀಡಿದೆ.
Next Story





