ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಪುನರ್ ರಚನೆ : ಸದಸ್ಯರ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯನ್ನು ಈ ಕೂಡಲೆ ಜಾರಿಗೆ ಬರುವಂತೆ ಹಾಗೂ ಮುಂದಿನ ಮೂರು ವರ್ಷಗಳ ಅವಧಿಗೆ ಪುನರ್ ರಚಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಮಂಡಳಿಯ ಉಪಾಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಶಾಸಕರಾದ ಅಶೋಕ್ ಪಟ್ಟಣ್, ಎಚ್.ಎಂ.ಗಣೇಶ್ ಪ್ರಸಾದ್, ಪುಟ್ಟಣ್ಣ ಅವರನ್ನು ನೇಮಕ ಮಾಡಲಾಗಿದೆ,
ವನ್ಯಜೀವಿ ಬಗ್ಗೆ ಕೆಲಸ ಮಾಡುವ ಸರಕಾರೇತರ ಸಂಸ್ಥೆಗಳ ಮುಖ್ಯಸ್ಥರು: ವೈಲ್ಡ್‍ಲೈಫ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾದ ಸುಶೀಲ್ ಗ್ಯಾನ್‍ಚಂದ್, ಟೈಗರ್ಸ್ ಅನ್‍ಲಿಮಿಟೆಡ್ ವೈಲ್ಡ್‍ಲೈಫ್ ಸೊಸೈಟಿಯ ಸೀಮಾ ಬೇಗಂ ಖಲೀಲ್, ಬೆಂಗಳೂರು ಎನ್ವಿರಾನ್‍ಮೆಂಟಲ್ ಟ್ರಸ್ಟ್ ನ ಡಾ.ದಿನೇಶ್ ಆರ್.ವಿ. ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರಜ್ಞರು ಹಾಗೂ ಪರಿಸರವಾದಿಗಳು: ರವೀಂದ್ರ ರಘುನಾಥ್(ಪರಿಶಿಷ್ಟ ಪಂಗಡ ಕೋಟಾ), ಚಿಕ್ಕಣ್ಣ(ಪರಿಶಿಷ್ಟ ಪಂಗಡ ಕೋಟಾ) ಡಾ.ರಾಜ್‍ಕುಮಾರ್ ಎಸ್.ಅಲ್ಲೆ, ಸಂಕೇತ್ ಪೂವಯ್ಯ, ವೈಶಾಲಿ ಕುಲಕರ್ಣಿ, ಅಜಿತ್ ಕರಿಗುಡ್ಡಯ್ಯ, ವಿನಯ್ ಕುಮಾರ ಮಾಳಿಗೆ, ಸಂತೃಪ್ತ್, ಧೃವ ಎಂ.ಪಾಟೀಲ್, ಮಲ್ಲಪ್ಪ ಎಸ್.ಅಂಗಡಿ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಪದನಿಮಿತ್ತ ಅಧಿಕಾರಿ ಸದಸ್ಯರು: ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯಪಡೆ ಮುಖ್ಯಸ್ಥರು), ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು.
ಅರಣ್ಯ ವಿಭಾಗದ ಐಜಿಪಿ, ಕೇಂದ್ರ ಸರಕಾರದ ಸಶಸ್ತ್ರ ಪಡೆಯ ಓರ್ವ ಪ್ರತಿನಿಧಿ(ಬ್ರಿಗೇಡಿಯರ್ ರ್ಯಾಂಕ್‍ಗಿಂತ ಮೇಲ್ಪಟ್ಟು), ಪಶುಸಂಗೋಪನೆ ಹಾಗೂ ಪಶುವೈದ್ಯ ಸೇವಾ ಇಲಾಖೆಯ ನಿರ್ದೇಶಕ, ಮೀನುಗಾರಿಕೆ ಇಲಾಖೆಯ ನಿರ್ದೇಶಕ, ಹೊಸದಿಲ್ಲಿಯ ವನ್ಯಜೀವಿ ಸಂರಕ್ಷಣೆ ನಿರ್ದೇಶಕರಿಂದ ನಾಮ ನಿರ್ದೇಶನ ಹೊಂದಿದ ಅಧಿಕಾರಿ.
ಡೆಹರಾಡೂನ್‍ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆಯ ನಿರ್ದೇಶಕರಿಂದ ನಾಮ ನಿರ್ದೇಶನ ಹೊಂದಿದ ಅಧಿಕಾರಿ, ಕೋಲ್ಕತ್ತಾದಲ್ಲಿರುವ ಜುವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ನಿರ್ದೇಶಕರಿಂದ ನಾಮ ನಿರ್ದೇಶನ ಹೊಂದಿದ ಅಧಿಕಾರಿ, ಬಟಾನಿಕಲ್ ಸರ್ವೆ ಆಫ್ ಇಂಡಿಯಾದ ನಿರ್ದೇಶಕರಿಂದ ನಾಮ ನಿರ್ದೇಶನ ಹೊಂದಿದ ಅಧಿಕಾರಿಯನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರನ್ನು ನೇಮಕ ಮಾಡಲಾಗಿದೆ ಎಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಜಿ.ಮಂಜುಳಾ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.







