ಬೆಂಗಳೂರು | ಮೊಬೈಲ್ ಬಳಸಬೇಡ ಎಂದಿದ್ದಕ್ಕೆ 20ನೆ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು : ಮೊಬೈಲ್ ಬಿಟ್ಟು, ವ್ಯಾಸಂಗ ಮಾಡುವಂತೆ ತಾಯಿ ಬುದ್ದಿವಾದ ಹೇಳಿದ್ ಕ್ಕೆ ಹತ್ತನೆ ತರಗತಿ ವಿದ್ಯಾರ್ಥಿನಿಯೊಬ್ಬಕೆ 20ನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್‍ಮೆಂಟ್‍ನಲ್ಲಿ ಈ ಘಟನೆ ನಡೆದಿದ್ದು, ಅವಂತಿಕಾ ಚೌರಾಸಿಯಾ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ಪೊಲೀಸರು ಗುರುತಿಸಿದ್ದಾರೆ.
ಮಧ್ಯಪ್ರದೇಶ ಮೂಲದ ಕುಟುಂಬ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದು, ಬಾಲಕಿಯ ತಂದೆ ಖಾಸಗಿ ಕಂಪೆನಿಯ ಇಂಜಿನಿಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ನಗರದ ಖಾಸಗಿ ಶಾಲೆಯಲ್ಲಿ ಅವಂತಿಕಾ ಚೌರಾಸಿಯಾ ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ಪರೀಕ್ಷೆಯಲ್ಲಿ ಅವಂತಿಕಾ ಕಡಿಮೆ ಅಂಕ ಗಳಿಸಿದ್ದಳು ಎನ್ನಲಾಗಿದೆ.
ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದಳು. ಇದನ್ನು ಗಮನಿಸಿದ ತಾಯಿ ಬುದ್ಧಿಮಾತು ಹೇಳಿ ಮೊಬೈಲ್ ಚಟ ಬಿಟ್ಟು ವ್ಯಾಸಂಗ ಮಾಡಲು ತಾಕೀತು ಮಾಡಿದ್ದಾರೆ. ಈ ಮಾತು ಕೇಳಿ ಬಳಿಕ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಘಟನೆ ಕಾಡುಗೋಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
¨





