ಬೆಂಗಳೂರು | ಪತ್ನಿಯಿಂದ ಕಿರುಕುಳ ಆರೋಪ; ರ‍್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆ

ಬೆಂಗಳೂರು : ಒಡಿಶಾ ಮೂಲದ ಖ್ಯಾತ ರ‍್ಯಾಪರ್ ಆಗಿರುವ ಅಭಿನವ್ ಸಿಂಗ್ ಬೆಂಗಳೂರಿನ ಕಾಡುಬೀಸನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಅಭಿನವ್ ಸಿಂಗ್, ಬೆಂಗಳೂರಿನ ಕಾಡುಬೀಸನಹಳ್ಳಿಯ ವಾಸವಾಗಿದ್ದರು. ಆದರೆ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಕಿರುಕುಳದಿಂದಲೇ ಅಭಿನವ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರಅವರ ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿವಿಧ ಆಯಾಮಾಗಳಲ್ಲಿ ತನಿಖೆ ನಡೆಸಿದ್ದಾರೆ.
Next Story





