ಕಾಲ್ತುಳಿತ ಪ್ರಕರಣ: ಐಜಿಪಿ ಎಂ.ಎ.ಸಲೀಂ ಜೊತೆ ಡಾ.ಜಿ.ಪರಮೇಶ್ವರ್ ಮಹತ್ವದ ಸಭೆ
ಪತ್ರ ವ್ಯವಹಾರದ ಸೋರಿಕೆ, ಎನ್ಐಎ ತನಿಖಾ ಸಾಧ್ಯತೆಗಳ ಚರ್ಚೆ

ಡಾ.ಜಿ.ಪರಮೇಶ್ವರ್, ಎಂ.ಎ.ಸಲೀಂ
ಬೆಂಗಳೂರು : ಆರ್ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣವು ಹೈಕೋರ್ಟ್ ನಲ್ಲಿ (ಜೂ.10) ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ವಿಧಾನಸೌಧದ ಗೃಹ ಸಚಿವರ ಕಚೇರಿಯಲ್ಲಿ ಡಾ.ಜಿ.ಪರಮೇಶ್ವರ್ ಹಾಗೂ ಪ್ರಭಾರ ಐಜಿಪಿ ಎಂ.ಎ.ಸಲೀಂ ಅವರು ಸೋಮವಾರ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಚರ್ಚಿಸಿದ್ದಾರೆ.
ಸಭೆಯಲ್ಲಿ ಈ ಪ್ರಕರಣ ಕುರಿತಂತೆ ಅಡ್ವೊಕೇಟ್ ಜನರಲ್ ಜೊತೆಗೆ ಹಂಚಿಕೊಳ್ಳಬೇಕಾದ ಮಾಹಿತಿಗಳು ಹಾಗೂ ಇದನ್ನು ಎನ್ಐಎಗೆ ಕೊಡಬೇಕೆಂಬ ವಿಪಕ್ಷಗಳ ಒತ್ತಾಯಕ್ಕೆ ಸಂಬಂಧಿಸಿದಂತೆ ತನಿಖಾ ಸಾಧ್ಯತೆಗಳ ಬಗ್ಗೆ ಹಾಗೂ ಕೆಎಸ್ಸಿಎ ಬರೆದ ಪತ್ರದಿಂದ ಮೊದಲ್ಗೊಂಡು ವಿವಿಧ ಇಲಾಖೆಗಳ ಜೊತೆಗಿನ ಪತ್ರ ವ್ಯವಹಾರದ ಸೋರಿಕೆಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಯ ಬಳಿಕ ಗೃಹ ಸಚಿವರು ಹಾಗೂ ಕಾನೂನು ಸಚಿವರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಸಭೆಯನ್ನು ನಡೆಸಿದರು.
Next Story