‘ವಿ.ಡಿ.ಸಾವರ್ಕರ್: ಏಳು ಮಿಥ್ಯೆಗಳು’ ನಾಳೆ(ಫೆ.18) ಕೃತಿ ಬಿಡುಗಡೆ
‘ಮತೀಯ ಪ್ರಭುತ್ವ ಮತ್ತು ಸೆಕ್ಯುಲರ್ ಪ್ರಜಾಪ್ರಭುತ್ವ’ ವಿಚಾರ ಸಂಕಿರಣ

ಬೆಂಗಳೂರು: ಲೇಖಕ ಡಾ.ಶಂಸುಲ್ ಇಸ್ಲಾಂ ಅವರ ‘ವಿ.ಡಿ.ಸಾವರ್ಕರ್: ಏಳು ಮಿಥ್ಯೆಗಳು’ ಕೃತಿಯ ಕನ್ನಡ ಅನುವಾದಿತ ಪುಸ್ತಕ ಬಿಡುಗಡೆ ಮತ್ತು ‘ಮತೀಯ ಪ್ರಭುತ್ವ ಮತ್ತು ಸೆಕ್ಯುಲರ್ ಪ್ರಜಾಪ್ರಭುತ್ವ’ ವಿಷಯದ ಕುರಿತು ನಾಳೆ(ಫೆ.18)ಬೆಳಗ್ಗೆ 11ಗಂಟೆಗೆ ಮಿಷನ್ ರಸ್ತೆಯ ಸುಬ್ಬಯ್ಯ ವೃತ್ತದಲ್ಲಿನ ಸಿಎಸ್‍ಐ ಕಾಂಪೌಂಡ್‍ನ ಸೌಹಾರ್ದ ಸಭಾಂಗಣದಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಮತೀಯ ಪ್ರಭುತ್ವ ಮತ್ತು ಸೆಕ್ಯುಲರ್ ಪ್ರಜಾಪ್ರಭುತ್ವ’ ವಿಷಯದ ಕುರಿತು ಲೇಖಕ ಡಾ.ಶಂಸುಲ್ ಇಸ್ಲಾಂ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಸಿಪಿಎಂ ಮುಖಂಡ ಡಾ.ಕೆ.ಪ್ರಕಾಶ್ ಅವರುಗಳು ಮಾತನಾಡಲಿದ್ದಾರೆ.
‘ವಿ.ಡಿ.ಸಾವರ್ಕರ್: ಏಳು ಮಿಥ್ಯೆಗಳು’ ಕೃತಿಯ ಕುರಿತು ಲೇಖಕಿ ಡಾ.ಮೀನಾಕ್ಷಿ ಬಾಳಿ ಅವರು ಮಾತನಾಡಲಿದ್ದು, ತಡಗಳಲೆ ಸುರೇಂದ್ರರಾವ್ ಅವರು ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





