Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಪ್ರತಿಭಟನೆಯ ಹಕ್ಕು ಕಸಿಯುವ 2021ರ...

ಪ್ರತಿಭಟನೆಯ ಹಕ್ಕು ಕಸಿಯುವ 2021ರ ಪರವಾನಗಿ ಆದೇಶ ಹಿಂಪಡೆಯಿರಿ: ನ್ಯಾ.ನಾಗಮೋಹನ್ ದಾಸ್ ಆಗ್ರಹ

ಬೆಂಗಳೂರಿನಲ್ಲಿ ಪ್ರತಿಭಟನೆಯ ಹಕ್ಕಿನ ಮೇಲಿನ ನಿರ್ಬಂಧಗಳ ಪರಿಣಾಮ ಅಧ್ಯಯನ ವರದಿ ಬಿಡುಗಡೆ

ಯೋಗೇಶ್ ಮಲ್ಲೂರು/ವಾರ್ತಾಭಾರತಿಯೋಗೇಶ್ ಮಲ್ಲೂರು/ವಾರ್ತಾಭಾರತಿ21 Nov 2026 7:16 PM IST
share
ಪ್ರತಿಭಟನೆಯ ಹಕ್ಕು ಕಸಿಯುವ 2021ರ ಪರವಾನಗಿ ಆದೇಶ ಹಿಂಪಡೆಯಿರಿ: ನ್ಯಾ.ನಾಗಮೋಹನ್ ದಾಸ್ ಆಗ್ರಹ

ಬೆಂಗಳೂರು : ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ಕರ್ನಾಟಕ ಸಿದ್ಧಪಡಿಸಿರುವ ಮತ್ತು ಹೋರಾಟದ ಹಕ್ಕಿಗಾಗಿ ಜನಾಂದೋಲನ ಪ್ರಕಟಿಸಿರುವ ‘ಪ್ರತಿಭಟಿಸುವ ಹಕ್ಕಿನ ನಿರಾಕರಣೆ: ಪ್ರಜಾಪ್ರಭುತ್ವದ ಮೇಲಿನ ದಾಳಿ-ಬೆಂಗಳೂರಿನಲ್ಲಿ ಶಾಂತಿಯುತವಾಗಿ ಒಗ್ಗೂಡುವ ಹಕ್ಕಿನ ಮೇಲಿನ ನಿರ್ಬಂಧಗಳ ಪರಿಣಾಮ ಕುರಿತಾದ ಒಂದು ಅಧ್ಯಯನ’ ಎಂಬ ವರದಿಯನ್ನು ಶನಿವಾರ ಬೆಂಗಳೂರಿನ ಶಾಸಕರ ಭವನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಬಿಡುಗಡೆ ಮಾಡಿದ್ದಾರೆ.

ಬಳಿಕ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ನಾಗಮೋಹನ್ ದಾಸ್, ಈ ವರದಿಯನ್ನು ಬಿಡುಗಡೆ ಮಾಡಲು ನಾವೆಲ್ಲರೂ ಇಲ್ಲಿ ಸೇರಿರುವುದೇ ಒಂದು ರೀತಿಯ ಪ್ರತಿಭಟನೆ. ಇಂದು ಜನರು ಅನುಭವಿಸುತ್ತಿರುವ ಹಕ್ಕುಗಳು ಹೋರಾಟಗಳು ಮತ್ತು ಪ್ರತಿಭಟನೆಗಳ ಮೂಲಕವೇ ದೊರೆತಿವೆ. ಸಂವಿಧಾನವು ಈ ಸ್ವಾತಂತ್ರ್ಯಗಳನ್ನು ಉದ್ದೇಶಪೂರ್ವಕವಾಗಿಯೇ ರಕ್ಷಿಸಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಪ್ರತಿಭಟನೆಯ ಹಕ್ಕೂ ಸೇರಿದೆ. ರಾಜ್ಯ ಸರಕಾರ 2021ರ ಪರವಾನಗಿ ಆದೇಶವನ್ನು ಕೂಡಲೇ ಹಿಂಪಡೆದು, ಜನರು ಶಾಂತಿಯುತವಾಗಿ ಸಭೆ ಸೇರುವ ಮತ್ತು ಪ್ರತಿಭಟಿಸುವ ಹಕ್ಕನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಜನರ ಹಕ್ಕುಗಳ ಬಗ್ಗೆ ಆಳವಾಗಿ ಆಲೋಚಿಸಿ ರೂಪಿಸಲಾದ ಸಂವಿಧಾನ ನಮ್ಮದು. ನಮ್ಮ ಸಂವಿಧಾನವು ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಪ್ರತಿಭಟನೆಯ ಹಕ್ಕೂ ಸೇರಿದೆ ಎಂದು ಸುಪ್ರೀಂ ಕೋರ್ಟ್ ಅನೇಕ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ, ಈ ಪರವಾನಗಿ ಆದೇಶದ ಮೂಲಕ ಆ ಹಕ್ಕನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ಈ ಆದೇಶವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಸಂವಿಧಾನದ ಉಲ್ಲಂಘನೆಯಾಗಿದೆ ಮತ್ತು ಜನರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಾಗಮೋಹನ್ ದಾಸ್ ಆಕ್ಷೇಪಿಸಿದರು.

ಈ ಆದೇಶವು ಒಂದು ಹಿನ್ನಡೆಯಷ್ಟೇ. ಅನ್ಯಾಯವನ್ನು ಎದುರಿಸುವ ಜನರ ಶಕ್ತಿಯು ಇಂತಹ ಎಲ್ಲ ಹಿನ್ನಡೆಗಳನ್ನು ಮೀರಿ ನಿಲ್ಲುತ್ತದೆ. ಈ ಆದೇಶವನ್ನು ಸರಕಾರ ಹಿಂಪಡೆಯಬೇಕೆಂಬ ನಮ್ಮ ಆಗ್ರಹದಲ್ಲಿ ನಾವು ದೃಢವಾಗಿರಬೇಕು. ಜಾಗತೀಕರಣದ ಪ್ರಭಾವದಿಂದಲೂ ಜನರ ಹಕ್ಕುಗಳಿಗೆ ವಿರುದ್ಧವಾದ ಪ್ರವೃತ್ತಿಗಳು ಬೆಳೆದಿವೆ. ನಮ್ಮ ಕಾಲದಲ್ಲಿ ನಾವು ಪ್ರತಿಭಟನೆ ನಡೆಸುವಾಗ, ಪ್ರತಿಭಟನಾಕಾರರ ನಡುವೆ ನುಗ್ಗಿ ಹೋಗುವ ಅಥವಾ ಅವರ ಪ್ರತಿಭಟನೆಗೆ ಅಡ್ಡಿಪಡಿಸುವ ಧೈರ್ಯವನ್ನು ಯಾವುದೇ ವಾಹನದವರು ತೋರುತ್ತಿರಲಿಲ್ಲ. ಆದರೆ ಇಂದು, ವಾಹನ ಸವಾರರಿಗೆ ಇಂತಹ ಅಡಚಣೆ ಉಂಟಾಗುವುದನ್ನೇ ಸಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಒಂದಷ್ಟು ಅನಾನುಕೂಲ ಉಂಟಾಗುವುದು ಸಹಜ ಎಂಬುದನ್ನು ಪೊಲೀಸರು ಅರ್ಥಮಾಡಿಕೊಳ್ಳಬೇಕು ಎಂದು ನಾಗಮೋಹನ್ ದಾಸ್ ತಿಳಿಸಿದರು.

ನಮ್ಮ ಹೋರಾಟ ನ್ಯಾಯಾಲಯದ ಒಳಗೂ ಹೊರಗೂ ನಡೆಯಬೇಕು. ಸರಕಾರವನ್ನು ತಲುಪಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಸೃಜನಶೀಲ ರೀತಿಯಲ್ಲಿ ಪ್ರತಿರೋಧ ಒಡ್ಡಿ, ಜನರ ಅಹವಾಲುಗಳಿಗೆ ಸರಕಾರ ಸ್ಪಂದಿಸುವಂತೆ ಮಾಡುವ ಮಾರ್ಗಗಳನ್ನು ಹುಡುಕಬೇಕು. ಪ್ರತಿಭಟನೆಯ ಹಕ್ಕನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ನಾವು ಪ್ರಜಾಪ್ರಭುತ್ವವನ್ನು ಉಳಿಸಬೇಕು. ನಮ್ಮ ಹಕ್ಕುಗಳ ಮೇಲಿನ ಈ ದಮನವನ್ನು ಎದುರಿಸಲು ಸಾಂಪ್ರದಾಯಿಕವಲ್ಲದ, ಆಧುನಿಕ ಮತ್ತು ಸೃಜನಶೀಲ ಮಾರ್ಗಗಳ ಬಗ್ಗೆಯೂ ಆಲೋಚಿಸಬೇಕು ಎಂದು ನಾಗಮೋಹನ್ ದಾಸ್ ಹೇಳಿದರು.

ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಮಾತನಾಡಿ, ಶೋಷಿತಗೊಂಡ ಸಮುದಾಯಗಳಿಗೆ ಪ್ರತಿಭಟನೆಯ ಹಕ್ಕು ಯಾವುದೇ ರಾಜಿಯಿಲ್ಲದ ಹಕ್ಕು. ಅವರಿಗೆ ಪ್ರತಿಭಟನೆಯನ್ನು ಹೊರತುಪಡಿಸಿ ಬೇರೆ ದಾರಿಯೇ ಇಲ್ಲ. ನಾವು ಫ್ರೀಡಂ ಪಾರ್ಕ್‍ಗೆ ಹೋಗಿ ಪ್ರತಿಭಟನೆ ನಡೆಸಲು ಸಾಧ್ಯವಾಗುತ್ತಿಲ್ಲ. ಫ್ರೀಡಂ ಪಾರ್ಕ್‍ನಲ್ಲಿ ಯಾರೊಂದಿಗೂ ಸಂವಾದ ನಡೆಸಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.

ದಸಂಸ(ಅಂಬೇಡ್ಕರ್‍ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಸರಕಾರದ ನಿಲುವಿನಲ್ಲಿ ಸಕಾರಾತ್ಮಕ ಬದಲಾವಣೆಯಾಗುವ ಸಾಧ್ಯತೆಯ ಸೂಚನೆಗಳನ್ನು ಸ್ವಾಗತಿಸಿದರು. ಈಗಾಗಲೇ ಆರಂಭವಾಗಿರುವ ಮಾತುಕತೆ ಮುಂದುವರಿಯಬೇಕು ಮತ್ತು ಅದು ಕೆಲವು ಸಕಾರಾತ್ಮಕ ಕ್ರಮಗಳಿಗೂ ದಾರಿ ಮಾಡಿಕೊಡಬೇಕು ಎಂದ ಅವರು, ನ.28ರ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.

ಅಧ್ಯಯನ ವರದಿಯನ್ನು ಮಂಡಿಸಿದ ಪಿಯುಸಿಎಲ್ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ ಐಶ್ವರ್ಯಾ, 2021ರ ಆದೇಶವು ಪ್ರತಿಭಟನೆಯ ಹಕ್ಕನ್ನು ಪೊಲೀಸರ ವಿವೇಚನೆಗೆ ಒಳಪಡಿಸಿರುವುದನ್ನು ವಿವರಿಸಿದರು. ಪೊಲೀಸರಿಗೆ ಪ್ರತಿಭಟನೆಯ ಕುರಿತು ಮಾಹಿತಿ ನೀಡಬೇಕಿದ್ದ ಕ್ರಮವನ್ನು ಬದಲಿಸಿ, ಅವರಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿರುವುದರಿಂದ ಮೂಲಭೂತ ಹಕ್ಕಾಗಿದ್ದ ಪ್ರತಿಭಟನೆಯ ಹಕ್ಕು ಪರವಾನಗಿ ಪಡೆಯಬೇಕಾದ ಸಂಗತಿಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಷ್ಟ್ರ ಸಮಿತಿಯ ದೀಪಕ್ ಮಾತನಾಡಿ, ಶಾಸಕರು ವಿಧಾನಸೌಧದ ಸಮೀಪವಿರುವ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಲು ಸಾಧ್ಯವಿದೆ. ಆದರೆ, ಸಾಮಾನ್ಯ ನಾಗರಿಕರಿಗೆ ಅದೇ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಸಭೆಯಲ್ಲಿ ಐಸಾದ ಹರೀಶ್, ಹಿಂದ್ ಮನ್ಸೂರ್ ಕಿಸಾನ್ ಪಂಚಾಯತ್‍ನ ಕಾಳಪ್ಪ, ಸಿಐಟಿಯುನ ಗೋಪಾಲಗೌಡ, ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಬಾಬು, ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಯೂಸುಫ್ ಕಾನ್ಸಿ, ಪಿಯುಸಿಎಲ್‍ನ ಅರವಿಂದ್ ನಾರಾಯಣ್, ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯ ಮಂಜುನಾಥ್ ಹಾಗೂ ಸ್ಲಂ ಜನಾಂದೋಲನ ಕರ್ನಾಟಕದ ತೇಜಸ್ ಮಾತನಾಡಿದರು.

ಪೊಲೀಸ್ ಆಯುಕ್ತರ ಭೇಟಿ :

ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೋರಾಟದ ಹಕ್ಕಿಗಾಗಿ ಜನಾಂದೋಲನದ ನಿಯೋಗಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರನ್ನು ಭೇಟಿ ಮಾಡಲು ಆಹ್ವಾನ ನೀಡಲಾಯಿತು. ನಿಯೋಗವು ವರದಿಯ ಪ್ರತಿಗಳನ್ನು ಸಲ್ಲಿಸಿ, ಅಭಿಯಾನದ ಬೇಡಿಕೆಗಳನ್ನು ಮತ್ತೊಮ್ಮೆ ತಿಳಿಸಿತು. ಮುಂದಿನ ಕ್ರಮಗಳ ಕುರಿತು ವಿವಿಧ ಸಾಧ್ಯತೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ ಮತ್ತು ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುವ ಕ್ರಮಗಳಿಗೆ ತಾವು ಪ್ರೋತ್ಸಾಹ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತರು ನಿಯೋಗಕ್ಕೆ ಭರವಸೆ ನೀಡಿದರು.

ಸಭೆಯ ನಿರ್ಣಯಗಳು :

► 2021ರ ಪರವಾನಗಿ ಆದೇಶವನ್ನು ನ.26ರೊಳಗೆ ಹಿಂಪಡೆಯದಿದ್ದಲ್ಲಿ, ನ.28ರಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆಯಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಯವರೆಗೆ ಮೆರವಣಿಗೆ ನಡೆಸಿ, ಸಾಮೂಹಿಕ ನಾಗರಿಕ ಅಸಹಕಾರ ಚಳವಳಿಯನ್ನು ಕೈಗೊಳ್ಳುವುದು.

► ಶಾಂತಿಯುತ ಪ್ರತಿಭಟನೆಯ ಹಕ್ಕಿನ ಮೇಲಿನ ಇಂತಹುದೇ ನಿರ್ಬಂಧಗಳನ್ನು ವಿರೋಧಿಸಿ ಪ್ರತಿರೋಧ ಒಡ್ಡಲು ಹೊಸದಿಲ್ಲಿ ಮತ್ತು ಮುಂಬೈ ಸೇರಿದಂತೆ ಇತರ ನಗರಗಳ ಜನರಿಗೂ ಕರೆ ನೀಡುವುದು.

Tags

Right to ProtestH.N.Nagamohan Das Urges
share
ಯೋಗೇಶ್ ಮಲ್ಲೂರು/ವಾರ್ತಾಭಾರತಿ
ಯೋಗೇಶ್ ಮಲ್ಲೂರು/ವಾರ್ತಾಭಾರತಿ

ಯೋಗೇಶ್ ಮಲ್ಲೂರು ಅವರು ವಾರ್ತಾಭಾರತಿ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ ವರದಿಗಾರ/ಉಪಸಂಪಾದಕ. ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಲ್ಲೂರಿನವರಾದ ಯೋಗೇಶ್, ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಇವರು ಹಲವು ದಿನಪತ್ರಿಕೆಗಳು ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಒಟ್ಟಾರೆ, ಪತ್ರಿಕೋದ್ಯಮ ವಲಯದಲ್ಲಿ ಬೆಂಗಳೂರು, ತುಮಕೂರಿನಲ್ಲಿ ಯೋಗೇಶ್ ಅವರಿಗೆ 7 ವರ್ಷಗಳ ಅನುಭವವಿದೆ.

Next Story
X