Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅತಿಯಾದ ಕೀಟನಾಶಕ ಬಳಕೆಯಿಂದ ಜೇನುಗೂಡು...

ಅತಿಯಾದ ಕೀಟನಾಶಕ ಬಳಕೆಯಿಂದ ಜೇನುಗೂಡು ಕಣ್ಮರೆ!

ಜೇನು ಸಂತತಿಗೆ ಎದುರಾದ ಆಪತ್ತು

ನಾರಾಯಣಸ್ವಾಮಿ ಸಿ.ಎಸ್.ನಾರಾಯಣಸ್ವಾಮಿ ಸಿ.ಎಸ್.24 Feb 2025 10:11 AM IST
share
ಅತಿಯಾದ ಕೀಟನಾಶಕ ಬಳಕೆಯಿಂದ ಜೇನುಗೂಡು ಕಣ್ಮರೆ!

ಹೊಸಕೋಟೆ : ಹೂವಿನ ಮಕರಂದ ಹೀರುವು ದರ ಜತೆಗೆ ನೈಸರ್ಗಿಕ ಪರಾಗಸ್ಪರ್ಶ ಮಾಡುವ ಹಾಗೂ ಸಿಹಿಜೇನು ನೀಡುವ ಜೇನುಹುಳು ಸಂತತಿಗೆ ಸದ್ದಿಲ್ಲದೇ ವಿಷ ಉಣಿಸಲಾಗುತ್ತಿದೆ. ಕೃಷಿ ಪರಿಸರದ ನಂಜು ತಾಳದೆ ಜೇನು ಕುಟುಂಬಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ವರ್ಷದಿಂದ ವರ್ಷಕ್ಕೆ ಜೇನುಹುಳುಗಳ ಪರಿವಾರ ಬಲಿಯಾಗುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ಆತಂಕ ಸೃಷ್ಟಿಸಿದೆ.

ಕೃಷಿಯಲ್ಲಿ ಯಾಂತ್ರೀಕರಣ, ಅರಣ್ಯ ನಾಶ, ಅತಿಯಾದ ಕೀಟನಾಶಕ ಬಳಕೆ ಮತ್ತು ಜೇನಿಗೆ ಅಗತ್ಯವಾಗಿ ಬೇಕಿರುವ ಸಸ್ಯವರ್ಗಗಳ ನಾಶವೇ ಇದಕ್ಕೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೇರಳವಾಗಿ ಬೆಳೆಯುವುದು ತರಕಾರಿ. ಬಿತ್ತನೆ ಬೀಜ ಸಹಜವಾಗಿಯೇ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸೇರಿದ ಕಾರಣ ರೋಗಗಳೂ ಅಧಿಕ. ಹಾಗಾಗಿ ಅತೀ ಹೆಚ್ಚು ಎನ್ನುವಷ್ಟರ ಮಟ್ಟಿಗೆ ಕೀಟನಾಶಕಗಳನ್ನು ಈ ಭಾಗದ ರೈತರು ಬಳಕೆ ಮಾಡುತ್ತಿದ್ದಾರೆ.

ಈಗ ಕಣ್ಣಿಗೆ ಜೇನು ನೊಣ ಕಂಡರೆ ನೆನಪಾಗುವುದು ಸಿಹಿಯಾದ ಜೇನು. ಹಿಂದೆ ಬಯಲು ಸೀಮೆ ಭಾಗದ ಕುರುಚಲು ಕಾಡು, ಬೆಟ್ಟಗುಡ್ಡದ ಕಲ್ಲುಬಂಡೆಗಳಲ್ಲಿ ಹೇರಳವಾಗಿ ಕಟ್ಟುತ್ತಿದ್ದ ಜೇನುಗಳು ಈಗ ಬಹುತೇಕ ಕಣ್ಮರೆಯಾಗಿದೆ.

ಪ್ರಸ್ತುತ ಅಳಿದುಳಿದಿರುವ ಜೇನು ಸಂತತಿಗೂ ಸಂಕಷ್ಟ ಎದುರಾಗಿದೆ. ಕೃಷಿಯಲ್ಲಿ ಯಾಂತ್ರೀಕರಣ, ಅರಣ್ಯ ನಾಶ, ಅತಿಯಾದ ಕೀಟನಾಶಕ ಬಳಕೆ ಮತ್ತು ಜೇನಿಗೆ ಅಗತ್ಯವಾಗಿ ಬೇಕಿರುವ ಸಸ್ಯವರ್ಗಗಳ ನಾಶವೇ ಇದಕ್ಕೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೇರಳವಾಗಿ ಬೆಳೆಯುವುದು ತರಕಾರಿ. ಬಿತ್ತನೆ ಬೀಜ ಸಹಜವಾಗಿಯೇ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸೇರಿದ ಕಾರಣ ರೋಗಗಳೂ ಅಧಿಕ. ಹಾಗಾಗಿ ಅತಿ ಹೆಚ್ಚು ಎನ್ನುವಷ್ಟರ ಮಟ್ಟಿಗೆ ಕೀಟನಾಶಕಗಳನ್ನು ಈ ಭಾಗದ ರೈತರು ಬಳಕೆ ಮಾಡುತ್ತಿದ್ದಾರೆ.

ಹೆಚ್ಚು ಕೀಟನಾಶಕ ಬಳಕೆ :

ದ್ರಾಕ್ಷಿ, ದಾಳಿಂಬೆ, ಗುಲಾಬಿ, ಸೇವಂತಿ ಹೂವು ಸಹಿತ ಇತರ ಬೆಳೆಗಳ ಸಂರಕ್ಷಣೆಗೆ ಸಹಜವಾಗಿ ವಾರಕ್ಕೆ ೩ ಬಾರಿಯಾದರೂ ಕೀಟನಾಶಕಗಳ ಸಿಂಪಡಣೆಯ ಕಾರ್ಯ ಮಾಡಲೇಬೇಕಾದ ಅನಿವಾರ್ಯ ರೈತರದ್ದಾಗಿದೆ.

ಅವನತಿಯತ್ತ ಜೇನು ಹುಳ :

ಹೆಚ್ಚಾಗಿ ಔಷಧ ಸಿಂಪಡಿಸಿದ ಹೂವುಗಳ ಮೇಲೆ ಜೇನು ನೊಣಗಳು ಮಕರಂದ ಹೀರಿದ ಕೂಡಲೇ ಸ್ಥಳದಲ್ಲೆ ಸಾಯುತ್ತವೆ. ಕಡಿಮೆ ವಿಷದ ಅಂಶದ ಮಕರಂದವನ್ನು ಗೂಡಿನವರೆಗೆ ತಂದರೂ ರಾಣಿ ನೊಣ ವಿಷಕಾರಿ ಮಕರಂದ ಸೇವಿಸಿ ಸಾವನ್ನಪ್ಪುತ್ತಿವೆ. ಜೇನು ನೊಣಗಳ ವಂಶಾಭಿವೃದ್ಧಿ ಮಾಡುವ ರಾಣಿ ನೊಣವೇ ಸತ್ತ ಮೇಲೆ ಜೇನುಗೂಡು ಅನಾಥವಾಗುವ ಜೊತೆಗೆ ಅಭಿವೃದ್ಧಿ ಇಲ್ಲದೆ ಕೆಲವೇ ದಿನಗಳಲ್ಲಿ ಅವನತಿ ಹೊಂದುತ್ತಿವೆ.

ಬೇಸಿಗೆಯಲ್ಲಿ ಹೇರಳ :

ಬಯಲು ಸೀಮೆ ಭಾಗಗಳಲ್ಲಿ ಸಹಜವಾಗಿ ಬೇಸಿಗೆಯಲ್ಲಿ ಮಾತ್ರ ಜೇನು ಹೇರಳವಾಗಿ ಸಿಗಲಿದೆ. ಕಾರಣ ಇಲ್ಲಿರುವ ಜೇನು ನೊಣಗಳಿಗೆ ಅಗತ್ಯವಿರುವ ಸಸ್ಯವರ್ಗವಾದ ಹೊಂಗೆ ಮತ್ತು ಬೇವಿನ ಮರಗಳು ಹೂವು ಬಿಡುವುದು ಯುಗಾದಿ ವೇಳೆ ನೂತನ ಚಿಗುರು ಬಂದ ನಂತರ. ಹಾಗಾಗಿ ಮಳೆಗಾಲದಲ್ಲಿ ಪೂರ್ತಿ ತಟಸ್ಥವಾಗಿರುವ ಜೇನು ಬೇಸಿಗೆ ಆರಂಭವಾಗುತ್ತಿದ್ದಂತೆ ಚುರುಕಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಜೇನು ಸಂಗ್ರಹಿಸುತ್ತವೆ.

ರೈತರಿಗೆ ಬಹುಪಯೋಗಿ :

ಜೇನು ನೊಣಗಳು ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ರೈತರ ಸಹಕಾರಿಯಾಗಿವೆ. ಅಪಾರವಾದ ಜೇನು ತುಪ್ಪ ಶೇಖರಿಸುವ ಮೂಲಕ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುವುದು ಮಾತ್ರವಲ್ಲದೆ, ರೈತರ ಬೆಳೆಗಳಲ್ಲಿ ಪರಾಗಸ್ಪರ್ಶ ಪ್ರಕ್ರಿಯೆಯಿಂದ ರೈತರಿಗೆ ಬಹುಪಯೋಗಿಗಳಾಗಿವೆ.

ರೈತನೇ ಕಾರಣ :

ಬೆಳೆಗಳಲ್ಲಿ ಪರಾಗಸ್ಪರ್ಶ ಪ್ರಮುಖ ಘಟ್ಟವಾಗಿದ್ದು, ರೈತರ ಬೆಳೆಗಳು ಕಾಯಿ ಕಟ್ಟಿ ಉತ್ತಮ ಫಸಲು ಬರಲು ಕೀಟಗಳು ಪ್ರಮುಖ ಪಾತ್ರವಹಿಸುತ್ತವೆ. ರೈತನಿಗೆ ಸಹಕಾರಿಯಾಗಿರುವ ಜೇನಿನ ನಾಶಕ್ಕೆ ರೈತನಿಗೆ ಅರಿವಿಲ್ಲದೆ ರೈತನೇ ಕಾರಣವಾಗಿರುವುದು ವಿಪರ್ಯಾಸವಾಗಿದೆ

ನಿಂತ ಜೇನು ಕೀಳುವ ಕಾಯಕ :

ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕೆಲವು ಕುಟುಂಬಗಳು ಜೇನು ಕೀಳುವ ಕಾಯಕವನ್ನು ವೃತ್ತಿಯಾಗಿ ಮಾರ್ಪಡಿಸಿಕೊಂಡಿದ್ದರು. ಶುದ್ಧವಾದ ಜೇನು ತುಪ್ಪವನ್ನು ಸಂಗ್ರಹಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಜೀವನವನ್ನು ಸಾಗಿಸುತ್ತಿದ್ದವು. ಕಾಲ ಕಳೆದಂತೆ ಜೇನು ಸಂತತಿ ಅವನತಿಯತ್ತ ಸಾಗಿದ ಪರಿಣಾಮ ಈ ವೃತ್ತಿಯನ್ನು ನಂಬಿದ ಕುಟುಂಬಗಳು ಜೇನು ಕೀಳುವ ಕಾಯಕಕ್ಕೆ ವಿದಾಯ ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದೆ ಕುರುಚಲು ಕಾಡುಗಳಲ್ಲಿ ಒಂದು ದಿನಕ್ಕೆ10 ರಿಂದ 20 ಜೇನುಗೂಡು ಕಣ್ಣಿಗೆ ಬೀಳುತ್ತಿದ್ದವು. ಈಗ ಕಾಣುವುದೇ ಅಪರೂಪ. ಕೆಲವೊಂದು ಕಡೆ ಇದ್ದರೂ ಅದರಲ್ಲಿ ತುಪ್ಪಇರುವುದಿಲ್ಲ. ಅತಿಯಾದ ಕೀಟನಾಶಕಗಳ ಬಳಕೆಯಿಂದ ಜೇನು ಸಂತತಿ ನಶಿಸುತ್ತಿದೆ.

-ಮುನಿವೆಂಕಟಪ್ಪ, ಜೇನು ಬೇಟೆಗಾರ ಮುತ್ಸಂದ್ರ

ಮಕರಂದ ಶುದ್ಧವಾಗಿದ್ದರಷ್ಟೇ ಸಂತಾನಾಭಿವೃದ್ಧಿ

ಮಾನವ ಇತರ ಜೀವ ಸಂಕುಲಗಳ ಆವಾಸ ಪ್ರದೇಶ ಅತಿಕ್ರಮಿಸುತ್ತಿದ್ದರೆ, ಜೇನುನೊಣಗಳ ಜೀವನಶೈಲಿ ಇದಕ್ಕೆ ತದ್ವಿರುದ್ಧ. ತನ್ನ ಆವಾಸದಲ್ಲಿ ಶುದ್ಧ ಮಕರಂದ ಇದ್ದರಷ್ಟೇ ಅವು ಸಂತತಿ ವೃದ್ಧಿಸುತ್ತವೆ. ಆದರೆ, ವಿಪರೀತ ಕೀಟನಾಶಕ ಬಳಕೆಯಿಂದ ಕೃಷಿ ಭೂಮಿ ಮಣ್ಣಿನ ಫಲವತ್ತತೆ ಕಳೆದುಕೊಳ್ಳುವುದರ ಜತೆಗೆ ನಂಜಿನ ಹವೆ ಹೆಚ್ಚುತ್ತಿದೆ ಎನ್ನುತ್ತಾರೆ

-ಕೀಟಶಾಸ್ತ್ರ ತಜ್ಞರು.

share
ನಾರಾಯಣಸ್ವಾಮಿ ಸಿ.ಎಸ್.
ನಾರಾಯಣಸ್ವಾಮಿ ಸಿ.ಎಸ್.
Next Story
X