ಬೇಕಲ: ನದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಗೆಳೆಯರೊಂದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ಬೇಕಲ ಠಾಣಾ ವ್ಯಾಪ್ತಿಯ ಉದುಮ ಎಂಬಲ್ಲಿ ನಡೆದಿದೆ.
ಉದುಮ ಹಯರ್ ಸೆಕಂಡರಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಎಸ್.ವಿ ಅಬ್ದುಲ್ಲ (14) ಮೃತಪಟ್ಟ ವಿದ್ಯಾರ್ಥಿ. ಕೋಟೆಕುನ್ನು ಎಂಬಲ್ಲಿ ನಡೆದ ಕುಟುಂಬ ಸಂಗಮದಲ್ಲಿ ಪಾಲ್ಗೊಂಡಿದ್ದ ಈತ ಸಂಜೆ ಗೆಳೆಯರ ಜೊತೆ ನದಿಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ.
ಉಳಿದವರ ಬೊಬ್ಬೆ ಕೇಳಿ ಸಕಾಲಕ್ಕೆ ಧಾವಿಸಿದ ಸ್ಥಳೀಯರು ವಿದ್ಯಾರ್ಥಿಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ ಎಂದು ತಿಳಿದು ಬಂದಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28
Next Story





