ಮಾನವೀಯ ಮೌಲ್ಯಗಳಲ್ಲಿ ಬದುಕುವುದೇ ದೇವರ ಆರಾಧನೆ : ಡಾ.ಕನಕಪ್ಪಾ ಪೂಜಾರಿ

‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್’ ವಿಚಾರ ಸಂಕಿರಣ
ಬೆಳಗಾವಿ, ಸೆ.21: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸೀರತ್ ವಿಚಾರ ಸಂಕಿರಣ-2025 ಅಂಗವಾಗಿ ‘‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್’’ ವಿಷಯದ ವಿಚಾರ ಸಂಕೀರಣವನ್ನು ಬೆಳಗಾವಿಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ, ರಿಷಿಕೇಶ್ ದೇಸಾಯಿ, ಗೋಪಾಲ ಗಾವಡಾ, ಡಾ. ಕನಕಪ್ಪಾ ಪೂಜಾರಿ, ಶಾಹೀದ್ ಮೆಮನ್, ರಿಜಾಝ್ ಅವಟಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಡಾ. ಕನಕಪ್ಪಾ ಪೂಜಾರಿ, "ಗುಡಿ ಗುಂಡಾರಕ್ಕೆ ಹೋಗಿ ಪೂಜಿಸುವುದೇ ದೇವರ ಆರಾಧನೆ ಅಲ್ಲ. ಮಾನವ ಮಾನವೀಯ ಮೌಲ್ಯಗಳನ್ನು ಅರಿತು ಬದುಕುವುದೇ ದೇವರ ಆರಾಧನೆ’’ ಎಂದು ಅಭಿಪ್ರಾಯಪಟ್ಟರು. ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ನಾಡಗೀತೆ ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮೊಸಿನ್ ಧಾಲಯತ್, ಶಾಹಿದ್ ಶಾಲಿಮಾರ್ ಉಪಸ್ಥಿತರಿದ್ದರು.
Next Story





