ಬೆಳಗಾವಿ | ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ; ಲಕ್ಷ್ಮಣ ಸವದಿ ಬಣ ಮೇಲುಗೈ

ಬೆಳಗಾವಿ : ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸಹಕಾರಿ ಸಂಘಗಳ ಚುನಾವಣೆಗಳು ರಾಜ್ಯದ ಗಮನ ಸೆಳೆದಿವೆ. ಇತ್ತೀಚೆಗೆ ಕಾವು ಪಡೆದಿದ್ದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಬಣಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ರೈತ ಸಹಕಾರಿ ಪೆನಲ್ ವಿಜಯಶಾಲಿಯಾಗಿದ್ದಾರೆ. ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣ ಸಕ್ಕರೆ ಕಾರ್ಖಾನೆ ಆವರಣದಲ್ಲಿ ರವಿವಾರ ನಡೆದ ಮತದಾನದಲ್ಲಿ ಜಾರಕಿಹೊಳಿ ಬೆಂಬಲಿತ ‘ಸ್ವಾಭಿಮಾನಿ ರೈತ ಪೆನಲ್’ ಹೀನಾಯವಾಗಿ ಸೋತು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮುಖಭಂಗ ಉಂಟಾಗಿದೆ.
► ಸವದಿ ಪೆನಲ್ ಕ್ಲೀನ್ ಸ್ವೀಪ್
ಒಟ್ಟು 13 ಸ್ಥಾನಗಳಲ್ಲಿ ಒಂದು ಸ್ಥಾನ ಅವಿರೋಧ ಆಯ್ಕೆಯಾಗಿದ್ದು, ಉಳಿದ 12 ಸ್ಥಾನಗಳಿಗೂ ನಡೆದ ಚುನಾವಣೆಯಲ್ಲಿ ಸವದಿ ಬೆಂಬಲಿತ ಪೆನಲ್ ಎಲ್ಲ ಸ್ಥಾನಗಳನ್ನೂ ಗೆದ್ದಿದೆ. ನ್ಯಾಯಾಲಯದ ನಿರ್ದೇಶನದ ಪ್ರಕಾರ ಅಧಿಕೃತ ಘೋಷಣೆ ತಡವಾದರೂ, ಅಣಕ ಫಲಿತಾಂಶದಲ್ಲಿ ಸವದಿ ಬಣ ಮುನ್ನಡೆ ಸಾಧಿಸಿದ್ದರಿಂದ ಅಥಣಿಯಲ್ಲಿ ಸಂಭ್ರಮಾಚರಣೆ ನಡೆಯಿತು.
Next Story





