Belagavi | ಸವದತ್ತಿ: ಟಂಟಂ-ಬಸ್ ನಡುವೆ ಅಪಘಾತ

ಬೆಳಗಾವಿ: ಬಸ್ ಹಾಗೂ ತರಕಾರಿ ಸಾಗಿಸುತ್ತಿದ್ದ ಟಂಟಂ ನಡುವೆ ಅಪಘಾತ ಸಂಭವಿಸಿದ ಘಟನೆ ಸವದತ್ತಿ ತಾಲೂಕಿನ ಸಿದ್ದನಕೊಳ್ಳ ಗ್ರಾಮದ ಎದುರಿನ ಕಮಾನ ಬಳಿ ಸೋಮವಾರ ನಡೆದಿದೆ.
ಅಪಘಾತದ ರಭಸಕ್ಕೆ ತರಕಾರಿ ಸಾಗಿಸುತ್ತಿದ್ದ ಟಂಟಂ ಪಲ್ಟಿಯಾಗಿದ್ದು, ಅದರಲ್ಲಿದ್ದ ತರಕಾರಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
Next Story




