ಅಥಣಿ: ಬೊಲೇರೊ–ಟ್ರ್ಯಾಕ್ಟರ್ ನಡುವೆ ಅಪಘಾತ; ಓರ್ವ ಮೃತ್ಯು

ಬೆಳಗಾವಿ: ಪಟ್ಟಣದ ಇನಾಪುರ ರಸ್ತೆಯಲ್ಲಿರುವ ಪ್ರಾರ್ಥನಾ ಕಾಲೇಜು ಸಮೀಪ ಸೋಮವಾರ ಬೊಲೇರೊ ವಾಹನ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೊಲೇರೊ ಚಾಲಕ ಮೃತಪಟ್ಟಿದ್ದಾರೆ.
ಮೃತರನ್ನು ಅಥಣಿ ನಿವಾಸಿ ಶಂಕರ ಪೂಜಾರಿ ಎಂದು ಗುರುತಿಸಲಾಗಿದೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
Next Story




