Belagavi | ಪಿಕಪ್ ವಾಹನ ಹರಿದು 3 ವರ್ಷದ ಬಾಲಕ ಸಾವು

ಸಾಂದರ್ಭಿಕ ಚಿತ್ರ
ಬೆಳಗಾವಿ : ಬುಲೆರೋ ಪಿಕಪ್ ವಾಹನವನ್ನು ರಿವರ್ಸ್ ತೆಗೆಯುವ ವೇಳೆ ವಾಹನ ಹರಿದು ಮೂರು ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಗೋಕಾಕ ತಾಲೂಕಿನ ಗಿಳಿಹೊಸೂರ ಗ್ರಾಮದಲ್ಲಿ ರವಿವಾರ ಸಂಜೆ ಸಂಭವಿಸಿದೆ.
ಗ್ರಾಮದ ನಿವಾಸಿ ರಾಮಚಂದ್ರ ಮಹಾದೇವ ದೇವಲಾಪೂರ ಅವರು ಅಕ್ಟೋಬರ್ 11ರಂದು ಸಂಜೆ ಸುಮಾರು 7.15ರ ವೇಳೆಗೆ ತಮ್ಮ ಬುಲೆರೋ ಪಿಕಪ್ ವಾಹನವನ್ನು ರಿವರ್ಸ್ ತೆಗೆಯುತ್ತಿದ್ದರು.
ಈ ವೇಳೆ ವಾಹನದ ಹಿಂದೆ ಸರಿಯಾಗಿ ಗಮನಿಸದೆ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಪರಿಣಾಮ ತಮ್ಮ ಮೂರು ವರ್ಷದ ಮಗ ಸಾತ್ವಿಕ್ಗೆ ವಾಹನ ಡಿಕ್ಕಿ ಹೊಡೆದು ಹರಿದಿದೆ ಎನ್ನಲಾಗಿದೆ. ಅಪಘಾತದಲ್ಲಿ ಬಾಲಕನ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story




