Belagavi | ದ್ವಿಚಕ್ರ ವಾಹನ–ಸಾರಿಗೆ ಬಸ್ ನಡುವೆ ಅಪಘಾತ: ಮೂವರು ಮೃತ್ಯು

ಬೆಳಗಾವಿ: ರಾತ್ರಿ ದ್ವಿಚಕ್ರ ವಾಹನ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ಧಾರವಾಡ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತರನ್ನು ಸ್ಥಳೀಯರಾದ ವಿನಯ್ ಜೋಗೆನ್ನವರ ಹಾಗೂ ಆಕಾಶ ಜಾಧವ, ರವಿ ಕುರುಬರ ಎಂದು ಗುರುತಿಸಲಾಗಿದೆ.
ಸಾರಿಗೆ ಬಸ್ ಬಸವ ಕಲ್ಯಾಣದಿಂದ ಹುಬ್ಬಳ್ಳಿ ಕಡೆಗೆ ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಬಸ್ಸಿನಡಿಗೆ ನುಗ್ಗಿದೆ ಎನ್ನಲಾಗಿದೆ. ಪರಿಣಾಮ ಬೈಕಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story




