Belagavi | ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿಗೆ ಕಾರಣ ತಿಳಿಸಿದ ಡಿಸಿಎಫ್

ಸಾಂದರ್ಭಿಕ ಚಿತ್ರ |Image by wirestock on Freepik
ಬೆಳಗಾವಿ : ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಂಭವಿಸಿದ 31 ಕೃಷ್ಣಮೃಗಗಳ ಸಾವಿಗೆ 'ಇಂಡೀಡ್ ಹೆಮರೈಜಿಕ್ ಸೆಪ್ಪಿಸಿಮಿಯಾ' ರೋಗವೇ ಪ್ರಮುಖ ಕಾರಣ ಎಂದು ಡಿಸಿಎಫ್ ಎನ್.ಇ.ಕ್ರಾಂತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಸೋಂಕು ಗಾಳಿಯ ಮೂಲಕವೂ, ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಹರಡುವ ಸಾಧ್ಯತೆ ಇರುವುದರಿಂದ ಮೃಗಾಲಯದ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಮುನ್ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
'ಸದ್ಯ ಮೃಗಾಲಯದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ. ಬದುಕುಳಿದ ಏಳು ಕೃಷ್ಣಮೃಗಗಳು ಲವಲವಿಕೆಯಿಂದ ಇವೆ. ಸೋಂಕು ಇತರ ಪ್ರಾಣಿಗಳಿಗೆ ತಗಲದಂತೆ ಕಟ್ಟೆಚ್ಚರ ವಹಿಸಿದ್ದೇವೆ'' ಎಂದು ಕ್ರಾಂತಿ ತಿಳಿಸಿದರು.
Next Story





