BELAGAVI | ಹಿಂಡಲಗಾ ಜೈಲಿಗೆ ಹೊರಗಡೆಯಿಂದ ಡ್ರಗ್ಸ್–ಮೊಬೈಲ್ ಎಸೆತ: ಸಿಸಿಟಿವಿ ಕ್ಯಾಮರಾದಲ್ಲಿ ಕೃತ್ಯ ಸೆರೆ

ಬೆಳಗಾವಿ: ನಗರದ ಹಿಂಡಲಗಾ ಕೇಂದ್ರ ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಹಾಗೂ ಮಾದಕ ವಸ್ತುಗಳನ್ನು ತಲುಪಿಸುವ ಯತ್ನ ಮತ್ತೆ ಮುಂದುವರಿದಿದೆ. ಜೈಲಿನ ಹೊರಗೋಡೆಯ ಮೇಲಿಂದ ಮೊಬೈಲ್, ಸಿಮ್ ಕಾರ್ಡ್ ಹಾಗೂ ಡ್ರಗ್ಸ್ ಒಳಗೆ ಎಸೆದು ಖದೀಮರು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಮಧ್ಯರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಧರಿಸಿದ್ದ ಕಿಡಿಗೇಡಿಗಳು, ಬಟ್ಟೆಯಲ್ಲಿ ಕಟ್ಟಿದ ವಸ್ತುಗಳನ್ನು ಜೈಲಿನ ಗೋಡೆಯ ಮೇಲಿಂದ ಏಕಾಏಕಿ ಎಸೆದು ಕ್ಷಣಾರ್ಧದಲ್ಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕೃತ್ಯ ಜೈಲಿನ ಸಿಸಿಟಿವಿ ಕ್ಯಾಮರಗಳಲ್ಲಿ ಸೆರೆಯಾಗಿದೆ.
ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
Next Story





