ಬೆಳಗಾವಿ | ಅಕ್ಕನ ಜೊತೆ ಮಾತನಾಡುತ್ತಿದ್ದಕ್ಕೆ ಬಾಲಕನಿಂದ ಯುವಕನ ಕೊಲೆ

ಮಂಜುನಾಥ
ಬೆಳಗಾವಿ : ತನ್ನ ಅಕ್ಕನ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದಾನೆ ಎಂಬ ಸಂದೇಹದಿಂದ ಅಪ್ರಾಪ್ತ ಬಾಲಕನೊರ್ವ, ಯುವಕನನ್ನು ಕಬ್ಬಿಣದ ಹಾರಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ರಾಜಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ರಾಜಾಪುರ ಗ್ರಾಮದ ನಿವಾಸಿ ಮಂಜುನಾಥ ಸುಭಾಸ ಎಣ್ಣಿ (23) ಕೊಲೆಯಾದ ಯುವಕ. ಕೊಲೆ ಮಾಡಿರುವ ಆರೋಪಿಯು ಅಪ್ರಾಪ್ತ ಬಾಲಕ ಎಂದು ತಿಳಿದುಬಂದಿದೆ.
ಮೃತ ಮಂಜುನಾಥ ಹಾಗೂ ಆರೋಪಿ ಬಾಲಕನ ಅಕ್ಕ ಪರಸ್ಪರ ಸಲುಗೆಯಿಂದ ಮಾತನಾಡುತ್ತಿದ್ದರು. ಇದನ್ನು ಕಂಡು ಆಕ್ರೋಶಗೊಂಡಿದ್ದ ಬಾಲಕನು ಸೋಮವಾರ ಮಂಜುನಾಥ ಗ್ರಾಮದ ವಿಠ್ಠೋಬಾ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದಾಗ, ಬಾಲಕನು ಕಬ್ಬಿಣದ ಹಾರಿಯಿಂದ ಮಂಜುನಾಥನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮವಾಗಿ ತೀವ್ರ ರಕ್ತಸ್ರಾವ ಉಂಟಾಗಿ ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





