ಬೆಳಗಾವಿ: ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಪತಿ
ಕೃತ್ಯವನ್ನು ವೀಡಿಯೊ ಮಾಡಿ ಮೃತರ ಸಂಬಂಧಿಕರಿಗೆ ಕಳಿಸಿದ್ದ ಆರೋಪಿ

ಬೆಳಗಾವಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಜಿಲ್ಲೆ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಹಾರಾಷ್ಟ್ರ ಮೂಲದ ಮೀರಾಬಾಯಿ ಕಬಲಿ(25) ಎಂದು ಗುರುತಿಸಲಾಗಿದೆ. ಬಾಲಾಜಿ ಕಬಲಿ(35) ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯಪಾನ ಮಾಡಿದ ಅಮಲಿನಲ್ಲಿ ಆರೋಪಿ ಬಾಲಾಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಕೃತ್ಯವನ್ನು ವಿಡಿಯೋ ಮಾಡಿ ಪತ್ನಿಯ ಸಂಬಂಧಿಕರಿಗೆ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಮೀರಾಬಾಯಿಗೆ ಇಬ್ಬರು ಮಕ್ಕಳಿದ್ದು, ಸುಮಾರು ಎರಡು ಪ್ರಾಯದ ಮಗು ತಾಯಿ ಮೃತದೇಹದ ಬಳಿ ಅಳುತ್ತಿದ್ದ ದೃಶ್ಯ ನೋಡುಗರ ಕರುಳು ಹಿಂಡುವಂತಿತ್ತು.
ಆರೋಪಿಯನ್ನು ಬಂಧಿಸಿರುವ ಪೊಲೀಸರು ವೀಡಿಯೊ ಮಾಡಿದ್ದ ಮೊಬೈಲ್ ಫೋನನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story