ಬೆಳಗಾವಿ| ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿತ

ಸಾಂದರ್ಭಿಕ ಚಿತ್ರ
ಬೆಳಗಾವಿ, ಜ.2: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ಯುವಕನೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವರದಿಯಾಗಿದೆ.
ಯಕ್ಸಾಂಬಾ ಪಟ್ಟಣದ ಅಕ್ಷಯ್ ಕಲ್ಲಟಗಿ ಎಂಬ ಯುವಕ, ಮೂವರು ಮಕ್ಕಳ ತಾಯಿಯಾದ ವಿವಾಹಿತ ಮಹಿಳೆಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಸಂಪರ್ಕದಲ್ಲಿದ್ದನು ಎನ್ನಲಾಗಿದೆ. ಯುವಕ ಆಗಾಗ ಮಹಿಳೆಯನ್ನು ಭೇಟಿಯಾಗುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಗುರುವಾರ ರಾತ್ರಿ ಮಹಿಳೆ ಯುವಕನಿಗೆ ಭೇಟಿಯಾಗಲು ಬರುವಂತೆ ಕರೆ ಮಾಡಿದ್ದಳು. ಇದನ್ನು ನಂಬಿ ಯುವಕ ಕರೋಶಿ ಗ್ರಾಮದತ್ತ ತೆರಳುತ್ತಿದ್ದಾಗ, ಅರ್ಧ ದಾರಿಯಲ್ಲೇ ಮಹಿಳೆಯ ಪತಿ ಹಾಗೂ ಆತನ ಸಹೋದರ ಯುವಕನನ್ನು ತಡೆದು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿರುವುದು ಬೆಳಕಿಗೆ ಬಂದಿದೆ.
ಗಂಭೀರವಾಗಿ ಗಾಯಗೊಂಡ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





