ಬಿಜೆಪಿ ರೈತರ ಪರವಾಗಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಿ: ಡಿಕೆಶಿ

ಡಿ.ಕೆ. ಶಿವಕುಮಾರ್
ಬೆಳಗಾವಿ: ಮೆಕ್ಕೆಜೋಳ, ಸಕ್ಕರೆ ಬೆಲೆ, ಎಥನಾಲ್ ವಿಷಯಗಳಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಕೇಂದ್ರ ಸರಕಾರ ರಾಜ್ಯಕ್ಕೆ 5400 ಕೋಟಿ ರೂ. ಕೊಡಬೇಕಾಗಿತ್ತು. ಈ ವರೆಗೆ ಕೊಟ್ಟಿಲ್ಲ. ಯಾವ ಅನುದಾನ ಕೂಡ ಕೇಂದ್ರ ಕೊಡುತ್ತಿಲ್ಲ. ಆದ್ದರಿಂದ ಬಿಜೆಪಿಯವರು ನಮ್ಮ ವಿರುದ್ಧವಲ್ಲ, ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಮಾತನಾಡಿದ ಡಿಸಿಎಂ, ರೈತರ ಪರವಾಗಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರಕ್ಕೆ ಮಹದಾಯಿ ವಿಚಾರವನ್ನ ಇಷ್ಟು ದಿನ ತೀರ್ಮಾನ ಮಾಡಲು ಆಗಿಲ್ಲ. ಮೇಕೆದಾಟಿನ ವಿಷಯದಲ್ಲಿ ನಾವು ಹೋರಾಟ ಮಾಡಿದ ಬಳಿಕವಷ್ಟೇ ನ್ಯಾಯ ಸಿಕ್ಕಿತು ಎಂದು ಡಿಕೆಶಿ ಹೇಳಿದರು.
ಕೇಂದ್ರದ ವಿರುದ್ಧ ಹೋರಾಟ ಮಾಡಬೇಕಾದಲ್ಲಿ, ಬಿಜೆಪಿ ನಾಯಕರು ಮಾನ–ಮರ್ಯಾದೆ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ಒಂದು ದಿನವೂ ಹೋಗಿ, ನಮ್ಮ ಸಂಸದರು ಬಾಯಿ ತೆರೆಯಲಿಲ್ಲ ಎಂದು ಟೀಕಿಸಿದರು.
Next Story





