ʼನಾಯಕತ್ವ ಬದಲಾವಣೆʼ ವಿಚಾರ | ಕ್ಯಾಪ್ಟನ್ಶಿಪ್ಗಾಗಿ ಟಾಸ್ ಹಾಕಿದವರನ್ನೇ ಕೇಳಿ : ಸಚಿವ ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ
ಬೆಳಗಾವಿ : ‘ಕ್ಯಾಪ್ಟನ್ಶಿಪ್ ಗಾಗಿ ಟಾಸ್ ಹಾಕಿದವರು ಅವರಿಬ್ಬರೇ. ಹೆಡ್ ಬಿದ್ದಿದೇಯೋ ಟೇಲ್ ಬಿದ್ದಿದೆಯೋ ಅವರನ್ನೇ ಕೇಳಿಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ‘ಮುಖ್ಯಮಂತ್ರಿ ಬದಲಾವಣೆ’ ವಿಚಾರವಾಗಿ ಸೂಚ್ಯವಾಗಿ ಪ್ರತಿಕ್ರಿಯಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಯಾಪ್ಟನ್ (ಮುಖ್ಯಮಂತ್ರಿ) ಆಗಲು ಸಿದ್ದರಾಮಯ್ಯ ಹಾಗೂ ಡಿಕೆಶಿ ಟಾಸ್ ಮಾಡಿದ್ದಾರೆ. ಕ್ಯಾಪ್ಟನ್ ಬದಲಾವಣೆ ಆಗುತ್ತಾರೋ ಅಥವಾ ಹಳೆಯ ಕ್ಯಾಪ್ಟನ್ ಮುಂದುವರೆಯುತ್ತಾರೋ ಅವರನ್ನೇ ಕೇಳಬೇಕು. ಅವರಿಬ್ಬರೂ ಕ್ಯಾಪ್ಟನ್ ಆಗಲು ಟಾಸ್ ಮಾಡುವಾಗ ಥರ್ಡ್ ಅಂಪೈರ್ ಇರಲಿಲ್ಲ. ಇಬ್ಬರೇ ಟಾಸ್ ಹಾಕಿದ್ದಾರೆ. ಈ ಟಾಸ್ ವಿಚಾರ ಅವರಿಬ್ಬರಿಗೇ ಗೊತ್ತು. ವರಿಷ್ಠರು ಅವರಿಗೆ ಏನು ಹೇಳಿದೆ ಎಂದು ಅವರನ್ನೇ ಕೇಳಬೇಕು ಎಂದು ತಿಳಿಸಿದರು.
Next Story





