ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟು ಕೊಡಲಿ, ಇಲ್ಲದಿದ್ದರೆ ಸರಕಾರವೇ ಉರುಳಬಹುದು: ವೀರೇಶ್ವರ ಸ್ವಾಮೀಜಿ

ಬೆಳಗಾವಿ :“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟು ಕೊಡಬೇಕು.” ಇಲ್ಲದಿದ್ದರೆ ಸರಕಾರವೇ ಉರುಳಬಹುದು ಎಂದು ಕಿತ್ತೂರು ತಾಲೂಕಿನ ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಡಿಕೆಶಿ ನೀಡಿದ ಸಹಕಾರವನ್ನು ನೆನಪಿಸಿ, “ಇದೀಗ ಎರಡನೇ ಅವಧಿಯಲ್ಲಿ ಸಿಎಂ ಸ್ಥಾನ ಡಿ.ಕೆ. ಶಿವಕುಮಾರ್ ಅವರಿಗೆ ನೀಡುವುದು ನೈತಿಕ ಜವಾಬ್ದಾರಿ” ಎಂದು ಹೇಳಿದ್ದಾರೆ.
ಸ್ಥಾನ ಹಸ್ತಾಂತರದ ವಿಚಾರ ಮುಂದೂಡಿದರೆ ಸರ್ಕಾರವೇ ಅಸ್ಥಿರವಾಗುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಎಚ್ಚರಿಸಿದ್ದಾರೆ. “ಅಧಿಕಾರ ಬಿಟ್ಟು ಕೊಡದಿದ್ದರೆ ಸಿದ್ದರಾಮಯ್ಯ ವಾಗ್ದಾನ ಭ್ರಷ್ಟರಾಗಿ ಜನಮನದಲ್ಲಿ ಉಳಿಯುವ ಅಪಾಯವಿದೆ. ಹಠ–ಮೊಂಡುತನ ಬಿಟ್ಟು ಕೊಟ್ಟ ಗ್ಯಾರಂಟಿ ಪಾಲಿಸಬೇಕು” ಎಂದು ವೀರೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
Next Story





