ವಿಧೇಯಕಗಳ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಿ: ಯು.ಟಿ.ಖಾದರ್

ಬೆಳಗಾವಿ : ವಿಧೇಯಕಗಳ ಕುರಿತು ಚರ್ಚೆ ಮಾಡಲಿಕ್ಕೆ ಶಾಸಕರು ಆಸಕ್ತಿ ಮೂಡಿಸಿಕೊಳ್ಳಿ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಶಾಸನ ರಚನೆ ಕಲಾಪದಲ್ಲಿ ವಿಧೇಯಕಗಳ ಅಂಗೀಕಾರಕ್ಕೆ ವಿಧೇಯಕಗಳು ಮಂಡನೆ ಆದ ಸಂದರ್ಭದಲ್ಲಿ ವಿಧೇಯಕಗಳ ಪರಿಭಾಷೆಯು ಕ್ಲಿಷ್ಟಕರವಾಗಿದ್ದು, ವಿಧೇಯಕಗಳ ಕನ್ನಡವನ್ನು ಸರಳೀಕರಣಗೊಳಿಸಬೇಕು ಎಂದು ಹಲವು ಶಾಸಕರು ಅಭಿಪ್ರಾಯಪಟ್ಟರು.
ಆಗ ಶಾಸಕರ ಅಭಿಪ್ರಾಯ ಆಲಿಸಿದ ಯು.ಟಿ.ಖಾದರ್, ವಿಧಾನಸಭೆಯಲ್ಲಿ ಮಂಡಿಸುವ ವಿಧೇಯಕಗಳ ಬಗ್ಗೆ ಚರ್ಚಿಸಲು ಶಾಸಕರುಗಳು ಆಸಕ್ತಿ ತೋರಿಸಬೇಕು. ವಿಧೇಯಕಗಳನ್ನು ಮಂಡಿಸಿದ ಸಂದರ್ಭದಲ್ಲಿ ವಿಧೇಯಕಗಳ ಕುರಿತು ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳಿಂದ ವಿಧೇಯಕಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ನುಡಿದರು.
Next Story





