ನ.13ರಂದು ಕಂಪ್ಲಿಯಲ್ಲಿ ತಾಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕಂಪ್ಲಿ: ಪಟ್ಟಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಾಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ.13ರಂದು ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಮ್ಮೇಳನದ ಅಧ್ಯಕ್ಷರಾಗಿ ಕಂಪ್ಲಿಯ ಬರಹಗಾರ ಬಂಗಿ ದೊಡ್ಡ ಮಂಜುನಾಥ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸಲಾಯಿತು. ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಬಾರಿಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ನ.13ರಂದು ಕಂಪ್ಲಿ ಪಟ್ಟಣ ಸಾಹಿತ್ಯ ಜಾತ್ರೆಗೆ ಸಾಕ್ಷಿಯಾಗಲಿದೆ.
ಸಭೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಸ್.ಜಿ. ಚಿತ್ರಗಾರ, ಪದಾಧಿಕಾರಿಗಳಾದ ಜಿ. ಪ್ರಕಾಶ್, ಕೆ.ಎಂ. ಹೇಮಯ್ಯಸ್ವಾಮಿ, ಎ.ಸಿ. ದಾನಪ್ಪ, ಕೃಷ್ಣ ಎಸ್. ಪೋಳ್, ಡಾ. ಸುನಿಲ್, ಶ್ಯಾಮ್ ಸುಂದರ್, ಅಂಬಿಗರ ಮಂಜುನಾಥ, ಎಸ್.ಡಿ. ಬಸವರಾಜ, ಯು.ಎಂ. ವಿದ್ಯಾಶಂಕರ, ಬಿ. ರುದ್ರಯ್ಯ ಸ್ವಾಮಿ, ಎಲಿಗಾರ ವೆಂಕಟರೆಡ್ಡಿ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.




