ಬಳ್ಳಾರಿ: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತ್ಯು

ಬಳ್ಳಾರಿ: ಕುರಿ ಮೇಯಿಸಲು ಹೋದ ವೇಳೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದೆ.
ಕುರಿ ಮೇಯಿಸಲು ಹೋದಾಗ ಮಳೆ ಬಂದ ಕಾರಣ ಮರದ ಬಳಿ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದೆ.
ಭೀರಪ್ಪ (45), ಸುನೀಲ್ (26) ಮತ್ತು ವಿನೋದ್ (14) ಮೃತಪಟ್ಟವರು.
ಸಿರಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story





