ಕಂಪ್ಲಿ | ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ 8 ಮಂದಿ ಅವಿರೋಧ ಆಯ್ಕೆ

ಬಳ್ಳಾರಿ : ಜಿಲ್ಲೆಯ ಕಂಪ್ಲಿ ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, 21 ಮಂದಿ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ 8 ಮಂದಿ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾದರು.
ಸೆ.26ರಂದು ನಡೆಯಲಿರುವ ಚುನಾವಣೆಗೆ ಒಟ್ಟು 29 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ, ಸೋಮವಾರ ಮಧ್ಯಾಹ್ನ 3 ಗಂಟೆಯೊಳಗೆ 21 ಮಂದಿ ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ, ಉಳಿದ 8 ಮಂದಿ ನೇರವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ರಾಮು ತಿಳಿಸಿದರು.
ವಿ.ಬಿ.ನಾಗರಾಜ (ಎಸ್ಸಿ ಮೀಸಲು), ಎನ್.ಆಂಜನೇಯಲು (ಎಸ್ಟಿ ಮೀಸಲು), ಗೌಡ್ರು ಅಂಜಿನಪ್ಪ (ಹಿಂದುಳಿದ ವರ್ಗ–ಎ), ಕೆ. ಭಾಸ್ಕರ್ ರೆಡ್ಡಿ (ಹಿಂದುಳಿದ ವರ್ಗ–ಬಿ), ಅರಳೆ ಮುತ್ತಯ್ಯ, ಹನುಮಂತಪ್ಪ ಕುರುಬರು (ಸಾಮಾನ್ಯ ಮೀಸಲು), ಜಿ. ಅಯ್ಯಮ್ಮ ಮತ್ತು ಕೆ. ರಾಧಾ (ಮಹಿಳಾ ಮೀಸಲು) ನಿರ್ದೇಶಕರಾಗಿ ಆಯ್ಕೆಯಾದರು.
ಕಡೆಮನೆ ನಾಗರಾಜ (ದೇವಸಮುದ್ರ ಪ್ರಾ.ಕೃ.ಪ.ಸ.ಸಂ), ಟಿ. ರಾಮು (ಎಮ್ಮಿಗನೂರು), ಕೆ. ದೊಡ್ಡಬಸಪ್ಪ (ಹಂಪಾದೇವನಹಳ್ಳಿ), ಅಳ್ಳಿ ನಾಗರಾಜ (ಕಂಪ್ಲಿ) ಮತ್ತು ಪಿ. ಚೊಕ್ಕರಾವ್ (ಸಣಾಪುರ) ಡೆಲಿಗೇಟ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರಿಗೆ ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಲಾಯಿತು.
ಈ ವೇಳೆ ಸಹಾಯಕ ರಿಟರ್ನಿಂಗ್ ಅಧಿಕಾರಿ ರಮೇಶ್, ಮುಖ್ಯಕಾರ್ಯನಿರ್ವಾಹಕ ಕೆ.ವಿರೇಶ, ನಾಮ ನಿರ್ದೇಶಿತ ಸದಸ್ಯ ಬಳ್ಳಾಪುರ ಲಿಂಗಪ್ಪ, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯರಾದ ಡಾ. ವಿ.ಎಲ್. ಬಾಬು, ಎನ್. ರಾಮಾಂಜಿನೇಯಲು ಹಾಗೂ ರೈತ ಮುಖಂಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.







