Ballari | ಮಾನಸಿಕ ಗಣಿತ ಸ್ಪರ್ಧೆ : ಎ-1 ಅಬಾಕಸ್ ಸೆಂಟರ್ ವಿದ್ಯಾರ್ಥಿಗಳ ಸಾಧನೆ

ಬಳ್ಳಾರಿ/ಕಂಪ್ಲಿ: ಚಿತ್ರದುರ್ಗದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಗ್ಯಾಲಕ್ಸಿ ಎಜು ಇನ್ನೋವೇಷನ್ ಸಂಸ್ಥೆ ಆಯೋಜಿಸಿದ್ದ ಎಂಟನೇ ಅಬಾಕಸ್ ಮತ್ತು ಮಾನಸಿಕ ಗಣಿತ ಸ್ಪರ್ಧೆಯಲ್ಲಿ ಸ್ಥಳೀಯ ಎ-1 ಅಬಾಕಸ್ ಸೆಂಟರ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಸ್ಪರ್ಧೆಯಲ್ಲಿ ಸೆಂಟರ್‌ನಿಂದ ಒಟ್ಟು 56 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಲಿಖಿದ್ ಕಲ್ಯಾಣ್, ಜಿ. ನಿಹಾಲ್, ಎಂ. ತಸ್ಮಿಯಾ, ಎಂ. ಸಮೀರ್ ಹಾಗೂ ಬಿ. ಸಾತ್ವಿಕ್ ಅವರು ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ.
ಇನ್ನುಳಿದ ವಿದ್ಯಾರ್ಥಿಗಳ ಪೈಕಿ ಏಳು ಮಂದಿ ಮೊದಲ ರನ್ನರ್ ಅಪ್, ಏಳು ಮಂದಿ ಎರಡನೇ ರನ್ನರ್ ಅಪ್, ಏಳು ಮಂದಿ ಮೂರನೇ ರನ್ನರ್ ಅಪ್, ನಾಲ್ವರು ನಾಲ್ಕನೇ ರನ್ನರ್ ಅಪ್, ಐವರು ಐದನೇ ರನ್ನರ್ ಅಪ್, ಮೂವರು ಆರನೇ ರನ್ನರ್ ಅಪ್, ಆರು ಮಂದಿ ಏಳನೇ ರನ್ನರ್ ಅಪ್ ಹಾಗೂ 12 ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಎ-1 ಅಬಾಕಸ್ ಸಂಸ್ಥೆಯ ಮುಖ್ಯಸ್ಥ ಬೆಲ್ಲದ್ ಗಿರೀಶ್ ಸಂತಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಹಾಯಕಿಯರಾದ ಭಾರತಿ, ಶಿಲ್ಪಾ, ಉಷಾ, ಜ್ಯೋತಿ, ವೈಷ್ಣವಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




