Ballari | ಕಂಪ್ಲಿ 10ನೇ ವಾರ್ಡ್‌ನಲ್ಲಿ ಚಲುವಾದಿ ಕೇರಿಯಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ

ಶಿಕ್ಷಣ ಮತ್ತು ಆರ್ಥಿಕ ಸಬಲತೆ ಅಗತ್ಯ : ಈಶ್ವರಪ್ಪ ವಡ್ಡಿನ
ಬಳ್ಳಾರಿ / ಕಂಪ್ಲಿ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣವಂತರಾಗುವ ಜೊತೆಗೆ ಆರ್ಥಿಕ ಸಬಲತೆ ಸಾಧಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹಾವಿನಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಈಶ್ವರಪ್ಪ ವಡ್ಡಿನ ತಿಳಿಸಿದರು.
ಪಟ್ಟಣದ 10ನೇ ವಾರ್ಡ್ ಚಲುವಾದಿ ಕೇರಿಯಲ್ಲಿ ಅಂಬೇಡ್ಕರ್ ಅಭಿಮಾನಿಗಳು ಆಯೋಜಿಸಿದ್ದ ಅಂಬೇಡ್ಕರ್ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಲೊನಿಯಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಚನ್ನಬಸಪ್ಪ, ಪಿ.ಸಿ. ಅಂಜಿನಪ್ಪ, ಕೆ. ಚಂದ್ರಪ್ಪ, ಸಣ್ಣಕ್ಕಿ ವಿರುಪಾಕ್ಷಿ, ವಸಂತರಾಜ ಕಹಳೆ, ಎಂ.ಸಿ. ಮಾಯಪ್ಪ, ರಾಮಚಂದ್ರಪ್ಪ, ಮಹೇಶ, ಷಣ್ಮುಖ, ಅಂಡಿ ಬಸವರಾಜ, ಜಾಲಿಹಾಳ ವೀರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Next Story




